ಶಿರಾಳಕೊಪ್ಪ ಠಾಣೆ ಪೊಲೀಸರು ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆದರು. 
ಜಿಲ್ಲೆ

ಜಾನುವಾರು ಕಳ್ಳತನ, ಆರೋಪಿ ಬಂಧನ

ನವೀನ ಬಿ.ಎಂ

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಚಿಕ್ಕಜಂಬೂರು ಗ್ರಾಮದ ಫಾರಂಹೌಸ್‌ನಿಂದ ಜಾನುವಾರುಗಳನ್ನು ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಿರುವ ಪೊಲೀಸರು, 2.40 ಲಕ್ಷ ರೂ.ಮೌಲ್ಯದ ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಆರಿಕಟ್ಟೆ ಗ್ರಾಮದ ಶಿವರಾಜ್‌ಕುಮಾರ್(26) ಬಂಧಿತ ಆರೋಪಿ. ಆ.9ರಂದು ಚಿಕ್ಕಜಂಬೂರು ಗ್ರಾಮದ ಫಾರಂಹೌಸ್‌ನಿಂದ ನಾಲ್ಕು ಹಸುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಮೊಹಮ್ಮದ್ ಆಲಿ ಖಾನ್ ಎಂಬುವರು ಶಿರಾಳಕೊಪ್ಪ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ಶಿರಾಳಕೊಪ್ಪ ಠಾಣೆ ಪಿಎಸ್‌ಐ ಟಿ.ಬಿ.ಪ್ರಶಾಂತ್‌ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಪುಷ್ಪಾ, ಸಿಬ್ಬಂದಿ ಸಂತೋಷ್, ಟೀಕಪ್ಪ, ಸಲ್ಮಾನ್, ಕಾರ್ತಿಕ್, ಅಶೋಕ್ ಮತ್ತು ಪ್ರೇಮಾಬಾಯಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.