ಜಿಲ್ಲೆ

ರಾಸು ಕಳ್ಳಸಾಗಣೆ ಆರೋಪಿ ಬಂಧನ

ಆರ್.ಕೃಷ್ಣ

ಮೈಸೂರು: ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ 14 ವಿವಿಧ ತಳಿಯ ರಾಸುಗಳನ್ನು ರಕ್ಷಿಸಿರುವ ಮೇಟಗಳ್ಳಿ ಠಾಣಾ ಪೊಲೀಸರು, ಆರೋಪಿ ಮೇಟಗಳ್ಳಿಯ ಫಾರೂಕ್ ಎಂಬಾತನನ್ನು ಬಂಧಿಸಿದ್ದಾರೆ.

ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಂಶ್ರೀ ನಗರದ ರೈಲ್ವೆ ಟ್ರಾೃಕ್ ಬಳಿ ಖಾಲಿ ಜಾಗದಲ್ಲಿ ಈತ ರಾಸುಗಳನ್ನು ಕಟ್ಟಿ ಹಾಕಿದ್ದ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಈತ ಸೂಕ್ತ ಮಾಹಿತಿ ನೀಡಲಿಲ್ಲ. ವಿಚಾರಣೆಗೆ ಒಳಪಡಿಸಿದಾಗ ಕಸಾಯಿಖಾನೆಗೆ ಸಾಗಿಸಲು ಮುಂದಾಗಿರುವುದು ತಿಳಿದು ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಕ್ಷಿಸ ಗೋವುಗಳನ್ನು ಪಿಂಜರಾಪೋಲ್ ವಶಕ್ಕೆ ನೀಡಲಾಗಿದೆ.