ಜಿಲ್ಲೆ

ಭಟ್ಕಳ ಅಕ್ರಮ ಜಾನುವಾರು ವಾಶಕ್ಕೆ

Uttara Kannada - Subash Hegde

ಭಟ್ಕಳ: ತಾಲೂಕಿನಲ್ಲಿ ಮತ್ತೆ ಅಕ್ರಮ ಜಾನುವಾರು ಸಾಗಾಟ ಪತ್ತೆಯಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯ ತಂಡ ಶುಕ್ರವಾರ ಬೆಳಗಿನ ಜಾವ ಭರ್ಜರಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಕೇರಳದಿಂದ ಭಟ್ಕಳ ಹನೀಫಾಬಾದ್ ಕಡೆಗೆ ಸಾಗಿಸುತ್ತಿದ್ದ ಅಶೋಕ್ ಲೈಲೆಂಡ್ ಕಂಟೇನರ್‌ನ್ನು ಪೊಲೀಸರು ಹನೀಫಾಬಾದ್ ಪಿ.ಬಿ. ಇಬ್ರಾಹಿಂ ಪೆಟ್ರೋಲ್ ಬಂಕ್ ಹತ್ತಿರ ತಡೆದು ವಶಕ್ಕೆ ಪಡೆದಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೇ, ನೀರು ಹುಲ್ಲು ಕೊಡದೇ, ಹಿಂಸಾತ್ಮಕವಾಗಿ ಕಟ್ಟಿಹಾಕಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಸಿಪಿಐ ಮಂಜುನಾಥ ಅಂಗಾರೆಡ್ಡಿ ಅವರ ನೇತೃತ್ವದ ತಂಡ ನಡೆಸಿದ್ದು, ಮದಿನಾ ಕಾಲನಿಯ ಅಬುಬಕ್ಕರ್ ಗಂಗಾವಳಿ, ಕೇರಳದ ಕಾಸರಗೋಡಿನ ಹಮೀದ, ಉತ್ತರ ಪ್ರದೇಶದ ಆಸಿಪ್, ಹೈದರಾಬಾದನ ಶಾಹುಲ್ ಹಮೀದ ಕೆ. ಬಂಧಿತರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.