ಯಲ್ಲಾಪುರ: ಇಲ್ಲಿನ ತಾ.ಪಂ ಸಭಾಭವನದಲ್ಲಿ ಮಾಸಿಕ ಕೆಡಿಪಿ ಸಭೆ ಆಡಳಿತಾಧಿಕಾರಿ ನಟರಾಜ. ಟಿ.ಎಚ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಶುಸಂಗೋಪನಾ ಇಲಾಖೆಯ ಡಾ.ಸುಬ್ರಾಯ ಭಟ್ಟ ಮಾತನಾಡಿ, ಸಿಬ್ಬಂದಿ ಕೊರತೆಯ ನಡುವೆಯೂ ಉತ್ತಮ ಸೇವೆ ನೀಡಲು ಪ್ರಯತ್ನಿಸಲಾಗುತ್ತಿದೆ. ತಾಲೂಕಿನಲ್ಲಿ ಜಾತಿ ಗಣತಿ ಮುಗಿದಿದ್ದು, ಜಾನುವಾರುಗಳ ಸಂಖ್ಯೆ 7000 ಕಡಿಮೆಯಾಗಿದೆ. ಮಿಶ್ರ ತಳಿಯ ಜಾನುವಾರುಗಳ ಸಂಖ್ಯೆ ಹೆಚ್ಚಿದೆ. ವಿವಿಧ ಕಾರಣಗಳಿಗಾಗಿ ಹೈನುಗಾರಿಕೆಯ ಆಸಕ್ತಿ ಕಡಿಮೆಯಾಗುತ್ತಿರುವುದು ಕಂಡುಬಂದಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ. ಮೊದಲು ಅಕಾಲಿಕ ಮಳೆ, ನಂತರ ಭಾರಿ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಈಗ ಶೇ.50 ರಷ್ಟು ಬಿತ್ತನೆಯಾಗಿದೆ ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಕುಂದು ಕೊರತೆಗಳ ಮಾಹಿತಿ ನೀಡಿದರು. ತಾ.ಪಂ ಇಒ ರಾಜೇಶ ಧನವಾಡಕರ್ ಹಾಗೂ ಅಧಿಕಾರಿಗಳು ಇದ್ದರು.