ಜಿಲ್ಲೆ

ಬೆಕ್ಕು ದಾಳಿ, ಇಬ್ಬರಿಗೆ ಗಾಯ

Mangaluru - Nishantha Narayana

ಪುತ್ತೂರು: ತೆಂಕಿಲ ಕ್ರಾಸ್ ಬಳಿ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲೆ ಬೆಕ್ಕು ದಾಳಿ ಮಾಡಿದ್ದು, ಇಬ್ಬರು ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿದಿದ್ದಾರೆ.

ಅಗ್ನಿ ಶಾಮಕ ದಳದ ಸಿಬ್ಬಂದಿ ಸಿದ್ದರೂಢ ಮತ್ತು ಮೌನೇಶ್ ಗಾಯಗೊಂಡವರಾಗಿದ್ದಾರೆ. ತೆಂಕಿಲ ಬಳಿಯ ಲಕ್ಷ್ಮೀ ಎಂಬುವರ ಮನೆಯ ಬಾವಿಗೆ ಸೋಮವಾರ ಬೆಕ್ಕೊಂದು ಬಿದ್ದಿದ್ದು, ಮನೆಯವರು ಅಗ್ನಿಶಾಮಕದಳಕ್ಕೆ ತಿಳಿಸಿದಾಗ ಸ್ಥಳಕ್ಕಾಗಮಿಸಿ ಇಬ್ಬರು ಸಿಬ್ಬಂದಿ ಬಾವಿಗೆ ಇಳಿದಿದ್ದಾರೆ. ಬಿಲದಲ್ಲಿದ್ದ ಬೆಕ್ಕು ಈ ಸಂದರ್ಭ ಭಯಗೊಂಡ ಸಿಬ್ಬಂದಿ ಮೇಲೆಯೇ ದಾಳಿ ಮಾಡಿದೆ. ಸಿಬ್ಬಂದಿಯ ಕೈಯನ್ನು ಕಚ್ಚಿದ ಬೆಕ್ಕು ಸುಮಾರು ೫ ನಿಮಿಷಕ್ಕೂ ಹೆಚ್ಚು ಸಮಯ ಬಿಟ್ಟಿರಲಿಲ್ಲ. ಇದರಿಂದ ಗಂಭೀರ ಗಾಯಗೊಂಡಿದ್ದಾರೆ.