ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ಜಯ ಭಾರತ ರಕ್ಷಣಾ ವೇದಿಕೆ ಮುಖಂಡರು ಮನವಿ ಸಲ್ಲಿಸಿದರು. ವೇದಿಕೆ ಅಧ್ಯಕ್ಷ ಮೌಲಾಸಾಬ ನಾಗರಹಾಳ, ಜಿಲ್ಲಾಧ್ಯಕ್ಷ ಯಮನೂರು ನದಾಫ್, ಪ್ರಮುಖರಾದ ಬಾಲನಗೌಡ, ಶಾಮೀದ ಸಾಬ, ಮೌಲಾಸಾಬ, ಬಸನಗೌಡ, ಮಾಸುಂ ಫರೀಫ್, ಗಯಾಸುದ್ದೀನ್, ಸಾಬರ್ ಪಾಷಾ ಇತರರಿದ್ದರು. 
ಜಿಲ್ಲೆ

ಕೋಟೆಯ ಕಂದಕ ಮುಚ್ಚದಿರಿ

ರುದ್ರಪ್ಪ ವಾಲಿ

ಲಿಂಗಸುಗೂರು: ಇತಿಹಾಸ ಪ್ರಸಿದ್ಧ ಮುದಗಲ್ ಕೋಟೆ ಸುತ್ತಲಿನ ಕಂದಕವನ್ನು ಕಲ್ಲು, ಬಂಡೆಗಳಿಂದ ಮುಚ್ಚುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಜಯ ಭಾರತ ರಕ್ಷಣಾ ವೇದಿಕೆ ಮುಖಂಡರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಐತಿಹಾಸಿಕ ಸ್ಮಾರಕಗಳು, ಕೋಟೆ ಕೋತಲಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಮುದಗಲ್ ಕೋಟೆ ಸುತ್ತಲಿನ ಕಂದಕದ ಕಲುಷಿತ ನೀರಿನಲ್ಲಿ ಕಲ್ಲು ಬಂಡೆಗಳನ್ನು ಹಾಕಿ ಮುಚ್ಚಲಾಗುತ್ತಿದೆ. ಕೂಡಲೇ ಇದನ್ನು ತಡೆದು ಕಂದಕ ಮುಚ್ಚದಂತೆ ಸಂರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಎಸಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದರು.