ಜಿಲ್ಲೆ

ಸಮಾಜದ ಪ್ರಗತಿಗೆ ಜಾತಿ ವ್ಯವಸ್ಥೆ ಅಡ್ಡಿ

ಮೈಸೂರು: ವಚನ ಸಾಹಿತ್ಯ ಉತ್ತಮ ಮೌಲ್ಯಗಳನ್ನು ಒಳಗೊಂಡ ಸಾಹಿತ್ಯವಾಗಿದೆ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.


ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕ, ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ಮತ್ತು ಬಸವ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ಅಂತರ ಕಾಲೇಜು ವಿದ್ಯಾರ್ಥಿಗಳಿಂದ ವಚನ ವಾಚನ ಮತ್ತು ವ್ಯಾಖ್ಯಾನ’ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಪ್ರಗತಿಗೆ ಜಾತಿ ವ್ಯವಸ್ಥೆ ಅಡ್ಡಿಯಾಗಿದೆ. ಈ ಸಮಾಜಕ್ಕೆ ಜಾತಿ ವಿನಾಶದ ಜ್ಯೋತಿ ಬೆಳಗಿಸಿದವರು ಶರಣರು. ಕುವೆಂಪು ಅವರ ಸರ್ವೋದಯ ಪರಿಕಲ್ಪನೆಯ ಮೂಲಮಂತ್ರ ವಚನಕಾರರಾದಾಗಿತ್ತು ಎಂದ ಅವರು, ಇಂದು ನುಡಿ ಶುದ್ಧಿಯಂತೆ ನಡೆ ಶುದ್ದಿಯ ತುರ್ತು ಇದೆ ಎಂದರು.
ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಮಾತನಾಡಿ, ಪ್ರತಿಯೊಬ್ಬರೂ ಶರಣರ ವಚನಗಳನ್ನು ಓದಿ ಅನುಷ್ಠಾನಕ್ಕೆ ತಂದಲ್ಲಿ ಬದುಕು ಹಿತವಾಗುತ್ತದೆ ಎಂದರು.

ಪ್ರಾಂಶುಪಾಲೆ ಪ್ರೊ.ಕೆ.ಸೌಮ್ಯಾ ಈರಪ್ಪ, ದತ್ತಿ ದಾನಿಗಳಾದ ಎಂ.ಎ.ನೀಲಾಂಬಿಕಾ, ಬಿ.ಸಿ.ಶರತ್‌ಚಂದ್ರ ಇತರರು ಭಾಗವಹಿಸಿದ್ದರು.