ಜಿಲ್ಲೆ

ಜಾತಿ ಗಣತಿ ಅವೈಜ್ಞಾನಿಕವೇ?

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜಾತಿ ಗಣತಿ ಅವೈಜ್ಞಾನಿಕ ಅಂತ ಯಾಕೆ ಉಪಯೋಗಿಸುತ್ತಾರೋ ಗೊತ್ತಿಲ್ಲ. ಅದು ವೈಜ್ಞಾನಿಕ ದತ್ತಾಂಶದಿಂದ ಕೂಡಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ ಬಲವಾಗಿ ಪ್ರತಿಪಾದಿಸಿದರು.

ನಗರದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕುರುಬ ಸಾಂಸ್ಕೃತಿಕ ಪರಿಷತ್​ ವತಿಯಿಂದ ಆಯೋಜಿಸಿರುವ 2 ದಿನಗಳ ಕುರುಬ ಸಾಹಿತ್ಯ- ಸಾಂಸ್ಕೃತಿಕ ಸಮ್ಮೇಳನದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ಜಾತಿ ಗಣತಿಗೆ ಈ ರಾಜ್ಯದ ಶೋಷಿತರ ಬೆಂಬಲ ಇದೆ. ಕೆಲವು ಜನ ಪೂರ್ಣಪ್ರಮಾಣದ ಅರಿವಿಲ್ಲದೆ ಮಾತನಾಡುತ್ತಿದ್ದಾರೆ, ಯಾವ ಜಾತಿಗು ಅನ್ಯಾಯವಾಗಿಲ್ಲ ಎಂದರು.

ಹಿಂದುಳಿದ ವರ್ಗಗಳಲ್ಲಿ ಕುರುಬರು ದೊಡ್ಡಣ್ಣ ಇದ್ದಂತೆ. ಶೇ.52ರಷ್ಟು ಜನಸಂಖ್ಯೆ ಹಿಂದುಳಿದವರಿದ್ದರು ಶೇ.32ರಷ್ಟು ಮೀಸಲು ಪ್ರಮಾಣ ಸಿಕ್ಕುತ್ತಿದೆ. ಸಿದ್ದರಾಮಯ್ಯ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿಗಳಿಗು ಆರ್ಥಿಕ, ಸಾಮಾಜಿಕ ಶಕ್ತಿ ತುಂಬಬೇಕೆಂಬ ಕಾರಣಕ್ಕೆ ಜಾತಿ ಗಣತಿ ವರದಿ ಜಾರಿಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.