ರಾಯಚೂರು ಮುಡಾ ಹಗರಣ ಸೇರಿ ಅನೇಕ ಹಗರಣ ಮುಚ್ಚಿಹಾಕಲು ರಾಜ್ಯ ಸರ್ಕಾರ ಜಾತಿಗಣತಿ ಆಯೋಗ ವರದಿ ಮಂಡನೆ ಮಾಡಲು ಮುಂದಾಗಿದೆAದು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ಮಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಹಗರಣಗಳ ಸುರಿಮಳೆ, ಗುತ್ತಿಗೆದಾರರ ಆರೋಪಗಳು, ಮುಡಾ ನೋಟಿಸ್ ಬಂದಿದೆ ಇವೆಲ್ಲವನ್ನು ದಿಕ್ಕು ಬದಲಿಸಲು ಜಾತಿಗಣತಿ ಆಯೋಗ ರಚನೆ ಮಾಡುವ ವಿಚಾರವನ್ನು ಶುರು ಮಾಡಿದ್ದಾರೆ. ಜನರಲ್ಲಿ ಗೊಂದಲವನ್ನು ಸೃಷ್ಠಿಸುವಲ್ಲಿ ಸಿಎಂ. ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಜಾತಿ ಗಣತಿಗಾಗಿ ಆಯೋಗರಚನೆ ಮಾಡಿರುವುದು ಜಾತಿ ಜಾತಿಗಳ ಮಧ್ಯೆ ವೈಷ್ಯಮ್ಯ ಬೆಳೆಸಿ, ರಾಜ್ಯ ಸರ್ಕಾರದ ಬಗ್ಗೆ ಜನರ ಆಕ್ರೋಶವನ್ನು ಬೇರೆಡೆ ತಿರುಗಿಸುವಂತಹ ತಂತ್ರವಲ್ಲದೇ ಮತ್ತೇನು ಅಲ್ಲ ಎಂದರು.
ಕಾಂಗ್ರೆಸ್‌ನವರು ಇದು ಜಾತಿಗಣತಿಯಲ್ಲ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ಎಂದು ಹೇಳುತ್ತಿದ್ದು, ಜಯಪ್ರಕಾಶ ಹೆಗಡೆಯವರು ನೀಡಿದ ಆಯೋಗದ ವರದಿಯ ಸಾರಾಂಶದಲ್ಲಿ ಇರಬೇಕಿತ್ತು. ಆದರೆ ಅದರಲ್ಲಿ ಈ ಅಂಶವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.