ಶಿವಮೊಗ್ಗ: ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿ ಜನಗಣತಿಯಿಂದ ಲಿಂಗಾಯತ ಸಮಾಜಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ಲಿಂಗಾಯತ ಸಮಾಜವನ್ನು ಛಿದ್ರಗೊಳಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಣತಿ ವಿಚಾರದಲ್ಲಿ ಜಾತಿಗಳನ್ನು ಒಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಆಯಾ ಸಮಾಜದ ಕ್ಷಮೆ ಕೇಳಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷದ ಹಲವು ಸಚಿವರು ಮತ್ತು ಶಾಸಕರು ಜನಗಣತಿ ಒಪ್ಪಿಲ್ಲ. ಪೂರ್ವ ತಯಾರಿ ಸರ್ಕಾರಕ್ಕಿಲ್ಲ. ಹಾಗಾಗಿ ಜನ ಗಣತಿ ಎಂಬುದು ಜನರಿಗೆ ಬಹುದೊಡ್ಡ ಹಿಂಸೆಯಾಗಿದೆ ಎಂದರು.
ಜಾತಿ ಜನಗಣತಿ ಎಂಬುದು ಹಿಂದು ಸಮಾಜವನ್ನೇ ಛಿದ್ರ ಮಾಡಲು ಹೊರಟಿದೆ. ಜನರಿಗೂ ಹಿಂಸೆ, ಸಮೀಕ್ಷಾದಾರರಿಗೂ ಹಿಂಸೆ. ಸಮೀಕ್ಷಾದಾರರಿಗೆ ನೂರೆಂಟು ಸಂಕಷ್ಟಗಳು, ಜನರಿಗೋ ಅರ್ಥವಿಲ್ಲದ ಪ್ರಶ್ನೆಗಳು. ಸಿದ್ದರಾಮಯ್ಯ ಹಠ ಮಾಡಿ ಗಣತಿ ಪ್ರಾರಂಭಿಸಿದ್ದು, ಈ ಜನಗಣತಿಯು ಹಳ್ಳ ಸೇರುವುದು ಖಚಿತ. ಈ ವರದಿ ಬಿಡುಗಡೆ ಆಗುವುದಿಲ್ಲ. ಒಟ್ಟಾರೆ ಜನಗಣತಿ ವಿಲ ಎಂದು ತಿಳಿಸಿದರು.