ಸಚಿವ ಮಧು ಬಂಗಾರಪ್ಪ 
ಜಿಲ್ಲೆ

ಜನಗಣತಿ ಜತೆಗೆ ಜಾತಿ ಗಣತಿ, ಮಧು ಬಂಗಾರಪ್ಪ ಸ್ವಾಗತ

ನವೀನ ಬಿ.ಎಂ

ಶಿವಮೊಗ್ಗ: ದೇಶದಲ್ಲಿ ಜನಗಣತಿ ಜತೆಗೆ ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವ ಮಧು ಬಂಗಾರಪ್ಪ ಧನ್ಯವಾದ ಸಲ್ಲಿಸಿದರು.

ರಾಜ್ಯದಲ್ಲಿ ನಡೆದಿರುವ ಜಾತಿ ಗಣತಿಗೆ ಬಿಜೆಪಿಯವರು ಟೀಕೆ ಮಾಡಿ ವಿರೋಧಿಸಿದ್ದರು. 54 ಅಂಶ ಇಟ್ಟುಕೊಂಡು ರಾಜ್ಯದಲ್ಲಿ ಜಾತಿಗಣತಿ ಆಗಿದೆ. ಒಳ್ಳೆಯ ವಿಚಾರಗಳಿಗೆ ಪ್ರತಿಪಕ್ಷದವರು ಸಹಕಾರ ನೀಡಬೇಕು. ಜಾತಿ ಗಣತಿ ವರದಿ ಸರಿಯಿಲ್ಲ ಎಂದಾದರೆ ಮತ್ತೊಮ್ಮೆ ಬೇಕಾದರೆ ಗಣತಿ ಮಾಡಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆಯೂ ಕೇಂದ್ರ ಅಂಕಿಅಂಶಗಳ ಮಾಹಿತಿ ತೆಗೆದುಕೊಳ್ಳಬೇಕಿದೆ. ಜಾತಿ, ಜನಗಣತಿಗೆ ಕೇಂದ್ರ ಸರ್ಕಾರ 500 ಕೋಟಿ ರೂ. ಮೀಸಲಿಟ್ಟಿದೆ. ಆದರೆ ಅಷ್ಟು ಹಣ ಸಾಕಾಗುವುದಿಲ್ಲ. ಗ್ಯಾರಂಟಿ ಯೋಜನೆ ನಕಲು ಮಾಡಿದ್ದ ಬಿಜೆಪಿ ಜಾತಿ ಗಣತಿಯನ್ನೂ ನಕಲು ಮಾಡಲು ಮುಂದಾಗಿದೆ ಎಂದರು.