ಜಿಲ್ಲೆ

ಆ.8ರಿಂದ 10 : ಬೆಂಗಳೂರಿನಲ್ಲಿ ಎಐಸಿಎ ಗೋಡಂಬಿ ಸಮಾವೇಶ

Mangaluru - Hariprasad Rai



ಮಂಗಳೂರು : ಆಲ್ ಇಂಡಿಯಾ ಕ್ಯಾಶ್ಯೂ ಅಸೋಸಿಯೇಷನ್(ಎಐಸಿಎ ) ಇದರ ವತಿಯಿಂದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ)ದ ಸಹಯೋಗದಲ್ಲಿ ಎಐಸಿಎ ಗೋಡಂಬಿ ಸಮಾವೇಶ ಆ.8ರಿಂದ 10ರವರೆಗೆ ಬೆಂಗಳೂರಿನ ಮಾನ್ಯತಾ ಬಿಸಿನೆಸ್ ಪಾರ್ಕ್‌ನ ಹಿಲ್ಟನ್‌ನಲ್ಲಿ ನಡೆಯಲಿದೆ.
ಆ.8ರಂದು ಸಾಯಂಕಾಲ 5ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಎಪಿಇಡಿಎ ಚೇರ್ಮನ್ ಅಭಿಷೇಕ್ ದೇವ್ ಗೌರವ
ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಪಿಇಡಿಎ ನಿರ್ದೇಶಕ ಡಾ.ತರುಣ್ ಬಜಾಜ್, ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕಿ ಡಾ. ಫೆಮಿನಾ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಲಹೆಗಾರ್ತಿ
ಡಾ. ಅಲ್ಕಾ ರಾವ್, ನಟ್ಸ್ ಮತ್ತು ಡ್ರೈ ಫ್ರುಟ್ಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಗುಂಜನ್ ಜೈನ್, ಎಇಸಿ-ಸಿಐ ಅಧ್ಯಕ್ಷ
ಅಲೆಕ್ಸ್ ಎನ್‌ಗೆಟಿಯಾ ಅಸ್ಸೌಮನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೂರು ದಿನದ ಸಮಾವೇಶ ಮೆಷಿನರಿ ಎಕ್ಸ್‌ಪೋ ಒಳಗೊಂಡಿದೆ. ಎಂಟು ತಯಾರಕರು ತಮ್ಮ ಇತ್ತೀಚಿನ ಯಂತ್ರಗಳನ್ನು ಪ್ರದರ್ಶಿಸಲಿದ್ದಾರೆ. ಸರಕು ಮತ್ತು ಸೇವೆಗಳ ಪೂರೈಕೆದಾರರಿಗೆ ಪ್ರದರ್ಶನದ ಅವಕಾಶ, ಖರೀದಿದಾರ ಹಾಗೂ ಮಾರಾಟಗಾರರ
ಭೇಟಿಗೆ ಪೆವಿಲಿಯನ್ ವ್ಯವಸ್ಥೆ ಕಲ್ಪಿಸಲಾಗಿದೆ.
ಭಾರತದಲ್ಲಿ ಕಚ್ಚಾ ಗೋಡಂಬಿ ಉತ್ಪಾದನೆ ಹೆಚ್ಚಿಸುವುದು, ತಂತ್ರಜ್ಞಾನದ ಉನ್ನತೀಕರಣ ಮತ್ತು ಸ್ಪರ್ಧಾತ್ಮಕತೆಗಾಗಿ ಗೋಡಂಬಿ ಕಾರ್ಖಾನೆಗಳ ಆಧುನೀಕರಣ ಮತ್ತು ಭಾರತದಲ್ಲಿ ಗೋಡಂಬಿ ಕಾಳುಗಳ ಸಾರ್ವತ್ರಿಕ ಪ್ರಚಾರಕ್ಕಾಗಿ ತಂತ್ರ ಈ ವಿಷಯಗಳನ್ನು ಕೇಂದ್ರೀಕರಿಸಿ ಸಮಾವೇಶದಲ್ಲಿ ಭಾರತೀಯ ಗೋಡಂಬಿ ಕ್ಷೇತ್ರದ ಬೆಳವಣಿಗೆ ಮತ್ತು ಸುಸ್ಥಿರತೆಗೆ ಬಗ್ಗೆ ವಿಸ್ತ್ರತ ಚರ್ಚೆ ನಡೆಯಲಿದೆ.
40ಕ್ಕೂ ಅಧಿಕ ಮಂದಿ ತಜ್ಞರು ವಿವಿಧ ಅವಧಿಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಭಾರತದಿಂದ ಸುಮಾರು 600 ಪ್ರತಿನಿಧಿಗಳು , ಐವರಿ ಕೋಸ್ಟ್, ಯುಎಇ ಮತ್ತು ಸಿಂಗಾಪುರದಿಂದ 30ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಎಐಸಿಎ ಗೋಡಂಬಿ ಸಮಾವೇಶ