ಜಿಲ್ಲೆ

ಅಂಗಡಿಯಿಂದ ನಗದು ಕಳವು

ಮಂಗಳೂರು: ನಗರದ ಜಪ್ಪಿನಮೊಗರುನಲ್ಲಿರುವ ಮಾಸುನ್ ಟೈಲ್ಸ್ ಆ್ಯಂಡ್ ಗ್ರಾನೈಟ್ ಮಳಿಗೆಯಿಂದ 12,400 ರೂ. ಕಳವಾಗಿದೆ.


ಮಳಿಗೆಯಲ್ಲಿ ಕೆಲಸ ಮಾಡುವ ಆಕಾಶ್ ಅವರು ಬಾಗಿಲು ತೆರೆದು ನೋಡಿದಾಗ ಡ್ರಾವರ್‌ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಅಂಗಡಿ ಮಾಲೀಕರಿಗೆ ವಿಷಯ ತಿಳಿಸಿದ್ದು, ಅವರು ಬಂದು ಪರಿಶೀಲಿಸಿದಾಗ ಕ್ಯಾಶ್ ಡ್ರಾವರ್‌ಗೆ ಯಾವುದೋ ಆಯುಧ ಉಪಯೋಗಿಸಿ ಅದರಲ್ಲಿದ್ದ 9,400 ರೂ. ಹಾಗೂ ಕುಳಿತುಕೊಳ್ಳುವ ಛೇಂಬರ್‌ನಲ್ಲಿದ್ದ ಡ್ರಾವರ್‌ನಲ್ಲಿದ್ದ 3 ಸಾವಿರ ರೂ. ಕಳವಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.