ಜಿಲ್ಲೆ

ನಗರದ ವಿವಿಧೆಡೆ ನಗದು, ಚಿನ್ನಾಭರಣ ಕಳವು

ಮೈಸೂರು: ನಗರದ ವಿವಿಧೆಡೆ ಕಳ್ಳರು ಅಂಗಡಿ ಸೇರಿದಂತೆ ಎರಡು ಮನೆಗಳಲ್ಲಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ದೋಚಿದ್ದಾರೆ.


ಪ್ರಕರಣ 1: ಹೂಟಗಳ್ಳಿಯ ನಿವಾಸಿ ಎಚ್.ಎಸ್.ಸ್ವಾಮಿ ಅವರು ಅ.11 ರಂದು ಊರಿಗೆ ತೆರಳಿದ್ದರು. ಮನೆ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, 1.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಹಾಗೂ 2.2 ಲಕ್ಷ ರೂ. ನಗದು ಕದ್ದಿದ್ದಾರೆ. ಮರುದಿನ ವಾಪಸ್ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಕರಣ 2: ಗಾಯತ್ರಿಪುರಂನ ನಿವಾಸಿ ವಸಂತಕುಮಾರ್ ಅ.3ರಂದು ಬೆಂಗಳೂರಿಗೆ ತೆರಳಿದ್ದರು. ಮನೆಯ ಮುಂಬಾಗಿಲು ಮೀಟಿ ಒಳನುಗ್ಗಿದ ಖದೀಮರು, ಬೀರುವಿನಲ್ಲಿಟ್ಟಿದ್ದ 74 ಗ್ರಾಂ ಚಿನ್ನಾಭರಣ, 15 ಸಾವಿರ ರೂ. ಕದ್ದಿದ್ದಾರೆ.

ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 3: ಬಂಡೀಪಾಳ್ಯದ ಶಿವಕುಮಾರ್ ಮಾಲೀಕತ್ವದ ಅಂಗಡಿಯಲ್ಲಿ ಕಳ್ಳತನವಾಗಿದೆ. ಹಣದ ಪೆಟ್ಟಿಗೆಯಲ್ಲಿ ಇಟ್ಟಿದ್ದ 2.75 ಲಕ್ಷ ರೂ. ಕಳವು ಮಾಡಿದ್ದಾರೆ ಎಂದು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾಲೀಕ ದೂರು ದಾಖಲಿಸಿದ್ದಾರೆ.