ಜಿಲ್ಲೆ

109 ಜನರಲ್ಲಿ ಸೋಂಕು ದೃಢ

Mandya

ವಿಜಯವಾಣಿ ಸುದ್ದಿಜಾಲ ಮಂಡ್ಯ

ಜಿಲ್ಲೆಯಲ್ಲಿ ಗುರುವಾರ 109 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3847ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆ ಪ್ರಕಟಿಸಿರುವ ಮಾಹಿತಿಯಂತೆ ಮಂಡ್ಯ ತಾಲೂಕಿನಲ್ಲಿ 23, ಮದ್ದೂರಿನಲ್ಲಿ 31, ಮಳವಳ್ಳಿಯಲ್ಲಿ 10, ಪಾಂಡವಪುರದಲ್ಲಿ 5, ಶ್ರೀರಂಗಪಟ್ಟಣದಲ್ಲಿ 19, ಕೆ.ಆರ್.ಪೇಟೆಯಲ್ಲಿ 12, ನಾಗಮಂಗಲ ತಾಲೂಕಿನಲ್ಲಿ 7 ಪ್ರಕರಣ ಹೊಸದಾಗಿ ಪತ್ತೆಯಾಗಿದೆ. ಅಂತೆಯೇ ಮೈಸೂರು ಮತ್ತು ರಾಮನಗರ ಜಿಲ್ಲೆಯ ತಲಾ ಒಬ್ಬರು ಚಿಕಿತ್ಸೆಗೆಂದು ಮಂಡ್ಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನು ಚಿಕಿತ್ಸೆ ಬಳಿಕ ಮಂಡ್ಯ ತಾಲೂಕಿನ 61 ಜನರು, ಮದ್ದೂರಿನ ನಾಲ್ವರು, ಮಳವಳ್ಳಿಯ ಒಬ್ಬರು, ಪಾಂಡವಪುರದ ಒಬ್ಬರು, ಶ್ರೀರಂಗಪಟ್ಟಣದ ಮೂವರು, ಕೆ.ಆರ್.ಪೇಟೆಯ ಏಳು ಜನರು ಮತ್ತು ನಾಗಮಂಗಲ ತಾಲೂಕಿನ 16 ಜನರು ಸೇರಿದಂತೆ 93 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಚೇತರಿಕೆಯಾದವರ ಸಂಖ್ಯೆ 2291ಕ್ಕೇರಿಕೆಯಾಗಿದೆ.

ಸದ್ಯ ಜಿಲ್ಲೆಯಲ್ಲಿ 1516 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 218 ಜನರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ, 138 ಜನರು ಜಿಲ್ಲಾ ಕೋವಿಡ್ ಕೇರ್ ಸೆಂಟರ್‌ನಲ್ಲಿ, 199 ಜನರು ತಾಲೂಕು ಕೋವಿಡ್ ಆಸ್ಪತ್ರೆಯಲ್ಲಿ, 327 ಜನರು ತಾಲೂಕು ಕೋವಿಡ್ ಕೇರ್ ಸೆಂಟರ್‌ನಲ್ಲಿ, 80 ಜನರು ಖಾಸಗಿ ಆಸ್ಪತ್ರೆಯಲ್ಲಿ ಹಾಗೂ 554 ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.