ಜಿಲ್ಲೆ

ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೇಡಿತನದ ಕೃತ್ಯ

ಮಡಿಕೇರಿ: ಅರ್ಚಕ ವಿಘ್ನೇಶ್ ಭಟ್ ಮೇಲೆ ನಡೆದ ಹಲ್ಲೆ ಮತ್ತು ಕಳೆದ ವರ್ಷ ಡಿ.೨೭ ರಂದು ಕಟ್ಟೆಮಾಡು ದೇವಾಲಯದಲ್ಲಿ ಕೊಡವ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ತೀವ್ರವಾಗಿ ಖಂಡಿಸುವುದಾಗಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಸಹಾಯಕ ಅರ್ಚಕರ ಮೇಲೆ ಹಲ್ಲೆ ನಡೆಸಿರುವುದು ಮತ್ತು ಕೊಡವ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವುದು ಹೇಡಿತನದ ಕೃತ್ಯಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳು ಭವಿಷ್ಯದಲ್ಲಿ ಮರುಕಳಿಸಬಾರದು. ಎಲ್ಲಾ ಸಮುದಾಯಗಳು ಭಯ ಅಥವಾ ತಾರತಮ್ಯವಿಲ್ಲದೆ ಸಹಬಾಳ್ವೆ ನಡೆಸಬಹುದಾದ ಶಾಂತಿಯುತ ಹಾಗೂ ಅಂತರ್ಗತ ವಾತಾವರಣಕ್ಕೆ ಸಿಎನ್‌ಸಿ ಒತ್ತಾಯಿಸುತ್ತದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.