ಜಿಲ್ಲೆ

ಕಳವು ಆರೋಪದಡಿ ಪ್ರಕರಣ ದಾಖಲು

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಅಮೃತ ಟಾಕೀಸ್ ಹಿಂದಿನ ಮನೆಯ ಬೀಗ ಮುರಿದು 30 ಸಾವಿರ ರೂ. ನಗದು ಹಾಗೂ 10 ಸಾವಿರ ರೂ. ಮೌಲ್ಯದ ಆಭರಣ ಕಳವು ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಮಜಾದ್ ಪಠಾಣ ಎಂಬುವವರ ವಿರುದ್ಧ ಮಹಿಳೆಯೊಬ್ಬರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.