ಜಿಲ್ಲೆ

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಬಂದರು ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಸಿಎಂ ಸಿದ್ದರಾಮಯ್ಯ, ಪೊಲೀಸರು, ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಸಂದೇಶಗಳನ್ನು ಹರಿಯಬಿಟ್ಟ ಹಿನ್ನೆಲೆಯಲ್ಲಿ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪಿರ್ಸ ಎಪ್ಪೊಲುಂ ಇಕ್ಕಟ್ಟ್’ ಎನ್ನುವ ವಾಟ್ಸಾಪ್ ಗ್ರೂಪ್‌ನಲ್ಲಿ ಅಶ್ರ್ ಕಿನಾರ ಕುದ್ರೋಳಿ ಎನ್ನುವ ಹೆಸರಿನ ವ್ಯಕ್ತಿ, ‘ಬ್ರೇಕಿಂಗ್...ಇದೀಗ ಸಜಿಪ ಪಾವೂರ್‌ನಲ್ಲಿ ಮತ್ತೆ ಪೊಲೀಸ್ ರೈಡ್..ಅಲ್ಲಾಹನ ಸಮರ್ಪಣೆಗೆ ತಂದಿಟ್ಟ ಉಲ್ಹಿಯ ಕೊಡುವ ಹಸುಗಳನ್ನು ವಶಪಡಿಸುತ್ತಿರುವ ಪೊಲೀಸರು. ಕೇಳಿದ್ರೆ ಸರ್ಕಾರದ ಆದೇಶವಂತೆ.. ಮುಸ್ಲಿಮರ ಮತಗಳಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರು ಒಟ್ಟಾಗಿ ಬಿಸಿ ಮುಟ್ಟಿಸಬೇಕು’ ಎಂದು ಸಂದೇಶ ಹಾಕಿದ್ದಾನೆ.

ಇನ್ನೊಂದು 57 ಸೆಕೆಂಡ್ ವಿಡೀಯೋ ಸಂದೇಶದಲ್ಲಿ ‘ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್, ಅಲಕ್ಕ ಪೋಯಿತಲ್ಲೇ..’ ಎಂಬುದಾಗಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮತ್ತು ಸಿಎಂ ಸಿದ್ದರಾಮಯ್ಯ ೆಟೋಗಳನ್ನು ಎಡಿಟ್ ಮಾಡಿ, ಸಿಂಗರ್: ದಸ್ತಕೀರ್, ಲಿರಿಕ್ಸ್: ಸರ್ ವಿಟ್ಲ ಎಂದು ಬರೆದು ಬ್ಯಾರಿ ಭಾಷೆಯಲ್ಲಿ ಕಾಂಗ್ರೆಸ್ ಪಕ್ಷ, ಸರ್ಕಾರದ ವಿರೋಧಿ ಹಾಡು ಹಾಡಿರುವ ವೀಡಿಯೋ ಮಾಡಿ ಹರಿಯಬಿಡಲಾಗಿದೆ.

ಬಾತ್ಮೀದಾರರ ಮೂಲಕ ಬಂದ ಮಾಹಿತಿಯಂತೆ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವ ಠಾಣಾ ಸಿಬಂದಿ ಸುನಿಲ್ ಕುಮಾರ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.