raichur 
ಜಿಲ್ಲೆ

ಗಾಂಜಾ ಸೇವನೆ ಮೂರು ಜನರ ವಿರುದ್ಧ ಪ್ರಕರಣ ದಾಖಲು

Raichur - Reporter - Rachhai Swamy

 ರಾಯಚೂರು ನಗರದ ಸದರ್ ಬಜಾರ ಠಾಣೆಯ ಪೊಲೀಸರಿಂದ ವಿವಿಧ ಕಡೆ ದಾಳಿ ಮಾಡಿ ಗಾಂಜಾ ಸೇವನೆ ಮಾಡುತ್ತಿದ್ದ ಮೂರು ಜನ ಯುಕರನ್ನು ವಶಕ್ಕೆ ಪಡೆದ ಘಟನೆ ಶನಿವಾರ ಸಂಜೆ ಜರುಗಿದೆ.

ಮಹ್ಮದ್ ಅಸೀಫ್(23),ಮಹ್ಮದ್ ಜೀಶನ್(18) ಮತ್ತು ಸೈಯಾದ್ ಹ್ಯಾರಿಸ್(24) ಗಾಂಜಾ ಸೇವನೆ ಮಾಡುತ್ತಿದ್ದ ಯುವಕರು. ನಗರದ ಪೆಟ್ಲಾಬುರ್ಜಾ,ಗಂಗಾ ನಿವಾಸ ಹಾಗೂ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪ್ರತ್ಯೆಕ ಸ್ಥಳದಲ್ಲಿ ಈ ಮೂರು ಜನ ಯುವಕರು ಗಾಂಜಾ ಸೇವನೆ ಮಾಡಿ ತಮ್ಮ ದೇಹದ ಮೇಲೆ ನಿಯಂತ್ರಣ

ಕಳೆದುಕೊತೂರಾಡುತ್ತಿದ್ದಾಗ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ರಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಮೂರು ಜನರ ವಿರುದ್ದ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.