ಕೊಳ್ಳೇಗಾಲ: ಫೇಸ್‌ಬುಕ್ ಪೇಜ್‌ನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಂಬಂಧ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಗಣೇಶ್ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಹೆಡ್ ಕಾನ್‌ಸ್ಟೇಬಲ್ ಪರಮೇಶ್ ದೂರು ನೀಡಿದ್ದಾರೆ.
ಜ.31ರಂದು ಬೆಳಗ್ಗೆ 10.30 ಗಂಟೆ ಸಮಯದಲ್ಲಿ ಕೊಳ್ಳೇಗಾಲ ಪಟ್ಟಣದ ಟಿ.ಪಿ.ವೃತ್ತದಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಎಂ.ಗಣೇಶ್ ಕೊಳ್ಳೇಗಾಲ ಪಟ್ಟಣದ ಪೊಲೀಸ್ ಅಧಿಕಾರಿಗಳನ್ನು ಕೇಳುವವರು ಯಾರೂ ಇಲ್ಲವೆ?, ಎಂಎಲ್‌ಎ ಅವರೇನು ನಿದ್ರೆ ಮಾಡುತ್ತಿದ್ದಾರ?. ಎಂಎಲ್‌ಎ ಅವರು ಹೇಳಿ ಇಬ್ಬರೂ ಪಿ.ಸಿ ಗಳನ್ನು ಹಾಕಿಸಬಹುದಲ್ಲವಾ, ಇವರಿಗೆ ಪ್ರಜ್ಞೆ ಬೇಡವಾ, ಮುಟ್ಠಾಳರನ್ನೆಲ್ಲ ಅಧಿಕಾರದಲ್ಲಿ ಕೂರಿಸಿದ್ದೀರಲ್ಲಾ ಅಧಿಕಾರಿಗಳಿಗೆ ಅಧಿಕಾರ ಕೊಟ್ಟು, ಸಂಬಳ ಕೊಟ್ಟು ಕೂರಿಸಿದ್ದಾರೆ, ಅಧಿಕಾರಿಗಳು ಸಂಬಳ ತಗೋತಾರೆ ಎಂದು ಇತ್ಯಾದಿಯಾಗಿ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳನ್ನು ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಪಡಿಸುವ ವಿಡಿಯೋ ಮಾಡಿ ಅದನ್ನು ತಮ್ಮದೇ ಪೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕರ್ತವ್ಯ ನಿರ್ವಹಿಸುವ ಸಾರ್ವಜನಿಕ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರನ್ನು ಎತ್ತಕಟ್ಟಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಉದ್ದೇಶದಿಂದ ಸರ್ಕಾರಿ ಅಧಿಕಾರಿಗಳನ್ನು ಬೈದು ಅವಮಾನಪಡಿಸಿರುತ್ತಾರೆ ಹಾಗೂ ಸಾರ್ವಜನಿಕ ನೆಮ್ಮದಿ ಹಾಳು ಮಾಡುವ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕರನ್ನು ಎತ್ತುಕಟ್ಟುವ ಉದ್ದೇಶದಿಂದ ವಿಡಿಯೋ ಮಾಡಿ ಹರಿಬಿಟ್ಟರುತ್ತಾನೆ ಈ ಹಿನ್ನೆಲೆಯಲ್ಲಿ ಎಂ.ಗಣೇಶ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಹೆಡ್ ಕಾನ್‌ಸ್ಟೇಬಲ್ ಪರಮೇಶ್ ದೂರು ನೀಡಿದ್ದಾರೆ.