ಜಿಲ್ಲೆ

ಪೊಲೀಸರ ಊಟದಲ್ಲಿ ಉಳು ಪತ್ತೆಯಾದ ಪ್ರಕರಣ: ದೂರು ದಾಖಲು, ಆರೋಪದ ಸಂಬಂಧ ಸೂಕ್ತ ತನಿಖೆಗೆ ಒತ್ತಾಯ

ಬೆಂಗಳೂರು: ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಕ್ರಿಕೇಟ್ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಮಧ್ಯಾಹ್ನದ ಊಟದಲ್ಲಿ ಉಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಪೂರೈಕೆ ಮಾಡಿದ್ದ ಕೇಟರಿಂಗ್ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

ಕರೀಬಸಪ್ಪ ಎಂಬ ಪೊಲೀಸ್ ಅಧಿಕಾರಿ ನೀಡಿದ ದೂರಿನನ್ವಯ ಶಾರದಾ ಕೇಟರಿಂಗ್ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅ.೨೦ ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆಗೆ ನಿಯೋಜನೆಗೊಂಡಿದ್ದ ೯೭೦ ಸಿಬ್ಬಂದಿಗೆ ಕ್ರೀಡಾಂಗಣದ ಆಡಳಿತ ಮಂಡಳಿ ಊಟದ ವ್ಯವಸ್ಥೆಯನ್ನು ಇವೇಂಟ್ ಕಂಪನಿಗೆ ವಹಿಸಿತ್ತು. ಕಂಪನಿಯವರು, ಅರಮನೆ ರಸ್ತೆಯ ಗಾಯತ್ರಿ ವಿಹಾರದ ಶಾರದಾ ಕೇಟರಿಂಗ್ ಊಟದ ಆರ್ಡರ್ ನೀಡಿದ್ದರು. ಸಿಬ್ಬಂದಿ ಊಟ ಮಾಡುವಾಗ ಮೊಸರನ್ನದಲ್ಲಿ ಹುಳ ಕಂಡು ಬಂದಿತ್ತು. ಊಟದಲ್ಲಿ ಸರಿಯಾದ ಶುಚಿತ್ವವನ್ನು ಕಾಪಾಡದ ಆರೋಪದಲ್ಲಿ ಕೇಟರಿಂಗ್ ವಿರುದ್ಧ ದೂರು ದಾಖಲಿಸಲಾಗಿತ್ತು. ದೂರಿನನ್ವಯ ಎ್ಐಆರ್ ದಾಖಲಾಗಿದೆ.

ಇದಕ್ಕೂ ಮೊದಲು ಕನ್ನಡಪರ ಹೋರಾಟಗಾರರು ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ಖಂಡಿಸಿ ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದ್ದರು. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಲಾದ ಊಟದ ಪ್ಯಾಕೇಟ್‌ನಲ್ಲಿ ಇಲಿ ಪತ್ತೆಯಾಗಿತ್ತು. ಇದಾದ ನಂತರ ಪೊಲೀಸರ ಊಟದಲ್ಲಿ ಉಳ ಪತ್ತೆಯಾಗಿತ್ತು.

ಸೂಕ್ತ ತನಿಖೆಯಾಗಲಿ:
ಕೆಲವೇ ದಿನಗಳ ಅಂತರದಲ್ಲಿ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಇಲಿ ಮತ್ತು ಉಳ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಖಾಸಗಿಯವರಿಗೆ ಊಟ ಪೂರೈಕೆ ಮಾಡುವುದನ್ನು ತಪ್ಪಿಸಲು ಇಲಾಖೆಯಲ್ಲಿರುವವರೆ ಇಲಿ ಮತ್ತು ಉಳವನ್ನು ಹಾಕಿ ಅದನ್ನು ಕೇಟರಿಂಗ್‌ನವರ ಮೇಲೆ ಆರೋಪ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ತಮ್ಮ ಸಂಬಂಧಿಕರ ಹೋಟೆಲ್‌ನಿಂದ ಆಹಾರ ಪೂರೈಕೆ ಮಾಡಲು ಆರ್ಡರ್ ನೀಡುವ ಸಂಬಂಧ ಈ ರೀತಿಯ ಕೃತ್ಯವನ್ನು ಕೆಲವರ ಮೂಲಕ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಸೂಕ್ತ ನಡೆದರೆ ಸತ್ಯಾಂಶ ಹೊರಬರಲಿದೆ ಎಂದು ಹೆಸರು ಹೇಳಲು ಇಚ್ಛಿಸಿದವರು ವಿಜಯವಾಣಿಗೆ ತಿಳಿಸಿದ್ದಾರೆ.