ಜಿಲ್ಲೆ

ಜುಗಾರಿ ಅಡ್ಡೆಗೆ ದಾಳಿ ಪ್ರಕರಣ ಮುಚ್ಚಿ ಹಾಕುವ ಯತ್ನ !

Mangaluru - Nishantha Narayana

ವಿಟ್ಲ: ವೀರಕಂಬ ಗ್ರಾಮದ ಎರ್ಮೆಮಜಲು ಗುಡ್ಡೆ ಪ್ರದೇಶದಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದು, ಮಾಹಿತಿ ನೀಡಿದ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದ ಆರೋಪ ಕೇಳಿ ಬರುತ್ತಿದೆ.

ಕೇಪುಳಕೋಡಿ ನಿವಾಸಿ ಗಣೇಶ್ (40) ಕುಳ ಕಾರ್ಯಾಡಿ ನಿವಾಸಿ ಸುಮಿತ್(29), ಬರಿಮಾರು ನಿವಾಸಿ ದಯಾನಂದ (30) ಅವರನ್ನು ಪೊಲೀಸರು ಬಂದಿಸಿದ್ದಾರೆ. ಎರ್ಮೆಮಜಲು ಗುಡ್ಡೆ ಪ್ರದೇಶದಲ್ಲಿ ಶುಕ್ರವಾರ ಸುಮಾರು 9 ಮಂದಿ ’ಉಳಾಯಿ ಪಿದಾಯಿ’ ಆಟವನ್ನು ಆಡುತ್ತಿದ್ದ ಸಂದರ್ಭ ವಿಟ್ಲ ಪೊಲೀಸರು ದಾಳಿ ನಡೆಸಿದ್ದು, ಮುರು ಮಂದಿಯನ್ನು ಬಂದಿಸಿದ್ದು, ಅವರಿಂದ ಸುಮಾರು 15 ಸಾವಿರ ಮೊತ್ತವನ್ನು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ. ಉಳಿದ 6 ಮಂದಿ ಪೊಲೀಸ ದಾಳಿಯನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆನ್ನಲಾಗಿದೆ. ಈ ಪ್ರಕರಣದ ಮಾಹಿತಿಯನ್ನು ಮಾಧ್ಯಮಕ್ಕೆ ನೀಡದೆ ಪೊಲೀಸ್ ಇಲಾಖೆ ಆರೋಪಿಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಮುಚ್ಚಿಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.