ಕುಮಟಾ: ತಾಲೂಕಿನ ಹೊಲನಗದ್ದೆ ಪಂಚಾಯಿತಿ ವ್ಯಾಪ್ತಿಯ ಕಡ್ಲೆ ಕ್ರೀಡಾಂಗಣದಲ್ಲಿ ಗಾಂಜಾ ಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿ ತೇಲಾಡುತ್ತಿದ್ದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಲನಗದ್ದೆಯ ನಿತಿನ್ ಲಕ್ಷ್ಮಣ ಹರಿಕಂತ್ರ (26) ಗಾಂಜಾ ಸೇವನೆ ಆರೋಪಿಯಾಗಿದ್ದು, ಮಾ. 11ರಂದು ಸಂಜೆ 7-30 ರ ಸುಮಾರಿಗೆ ಕಡ್ಲೆ ಮೈದಾನದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ತೇಲಾಡುತ್ತಿದ್ದ. ಈ ವೇಳೆ ಪೊಲೀಸರ ಕೈಗೆ ಸಿಲುಕಿಕೊಂಡಿದ್ದು ಆರೋಪಿಯನ್ನು ತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕುಮಟಾ ಪೊಲೀಸರು ಆರೋಪಿ ನಿತಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.