ಜಿಲ್ಲೆ

ಸ್ಕೂಟರ್ ಚಲಾಯಿಸಿದ ಬಾಲಕ, ಮಾಲೀಕನ ಮೇಲೆ ಕೇಸ್

ಕಾಸರಗೋಡು : ಅಪ್ರಾಪ್ತನಿಗೆ ಸ್ಕೂಟರ್ ಚಲಾಯಿಸಲು ನೀಡಿದ ಆರ್‌ಸಿ ಮಾಲೀಕನ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೀಂಜ ಪಂಚಾಯಿತಿ ಕಂಚಿಲ ಎಂಬಲ್ಲಿ ಮಂಜೇಶ್ವರ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುವ ಮಧ್ಯೆ ಅಪ್ರಾಪ್ತನೊಬ್ಬ ಚಲಾಯಿಸಿಕೊಂಡು ಬಂದ ಸ್ಕೂಟರ್ ತಡೆದು, ಅದರ ಆರ್‌ಸಿ ಮಾಲೀಕ ಮಹಮ್ಮದ್ ಎಂಬವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.