ಜಿಲ್ಲೆ

ಒಂಬತ್ತು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ

ಸೌಮ್ಯ ಆರ್

ಕಾಸರಗೋಡು: ಶಾಲೆಗೆ ಶೂ ಧರಿಸಿ ಆಗಮಿಸಿದ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಮಂದಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ರ‌್ಯಾಗಿಂಗ್ ಕಾಯ್ದೆಯನ್ವಯ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರಿನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೂನ್ 20ರಂದು ಘಟನೆ ನಡೆದಿದ್ದು, ಇಲ್ಲಿನ ಪ್ಲಸ್‌ವನ್ ತರಗತಿ ವಿದ್ಯಾರ್ಥಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಶೂ ಧರಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳ ತಂಡ ತಡೆದು ನಿಲ್ಲಿಸಿ ಹೀಯಾಳಿಸಿ, ಅಸಭ್ಯವಾಗಿ ನಿಂದಿಸಿರುವುದಲ್ಲದೆ ಥಳಿಸಿತ್ತು. ಬೆಂಚನ್ನು ವಿದ್ಯಾರ್ಥಿಯ ಮೇಲೆ ಎತ್ತಿಹಾಕಿ ಕ್ರೌರ್ಯ ಮೆರೆದಿತ್ತು. ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿಯೂ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.