ಹುಬ್ಬಳ್ಳಿ: ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಪೌಷ್ಟಿಕ ಆಹಾರ ಕಾಳಸಂತೆಗೆ ಸಾಗಿಸುತ್ತಿದ್ದ ಆರೋಪದಡಿ ಒಟ್ಟು ನಾಲ್ವರ ವಿರುದ್ಧ ಇಲ್ಲಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗನವಾಡಿ ಶಿಕ್ಷಕಿ ಬತುಲಾ ಕಿಲ್ಲೇದಾರ ಹಾಗೂ ಆಕೆಯ ಪತಿ ಫಾರೂಕ್, ಗೋದಾಮಿನಲ್ಲಿರುವ ನಾಗರಾಜ ಮತ್ತು ಮಂಜುನಾಥ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ಹಸ್ತಾಂತರಕ್ಕೆ ಕಾಯಲಾಗುತ್ತಿದೆ. ಆ ಬಳಿಕ ತನಿಖೆ ಚುರುಕುಗೊಂಡರೆ, ಸರ್ಕಾರಿ ನೌಕರರು ಇದರಲ್ಲಿ ಶಾಮೀಲಾಗಿರುವುದು ಬಯಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.