ಜಿಲ್ಲೆ

ಅಪ್ರಾಪ್ತರಿಗೆ ಅವಾಚ್ಯವಾಗಿ ನಿಂದನೆ

Mangaluru - Nishantha Narayana

ಪುತ್ತೂರು: ಬೀರಮಲೆ ಬೆಟ್ಟದಲ್ಲಿ ಇಬ್ಬರು ಅಪರಿಚಿತರು ಅಪ್ರಾಪ್ತ ಬಾಲಕ ಹಾಗೂ ಬಾಲಕಿಯನ್ನು ಅವಾಚ್ಯವಾಗಿ ನಿಂದಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿ, ಅನ್ಯಧರ್ಮದ ಯುವಕನೆಂದು ತಮ್ಮ ಮಾಹಿತಿ ಪಸರಿಸಿದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುದ್ಮಾರು ನಿವಾಸಿ ಪುರುಷೋತ್ತಮ (೪೩) ಹಾಗೂ ಆರ್ಯಾಪು ನಿವಾಸಿ ರಾಮಚಂದ್ರ (೩೮) ಅವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಬಿರುಮಲೆ ಬೆಟ್ಟದಲ್ಲಿ ಯುವಕ ಹಾಗೂ ಯುವತಿಯನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ವಿಡಿಯೋವನ್ನು ಸಾಮಾಜಿಕ ಜಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿರುವುದಲ್ಲದೆ, ದೂರುದಾರರ ಮಗನನ್ನು ಅನ್ಯಧರ್ಮದವನೆಂದು ನಿಂದಿಸಿ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರನ್ನು ಕರೆದು ಅವಮಾನಿಸಿ ವಿಡಿಯೋ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಲತಾಣವಾದಲ್ಲಿ ಹರಿಯಬಿಟ್ಟಿದ್ದಾರೆ. ಈ ಮೂಲಕ ಕೋಮುಸಾಮರಸ್ಯ ಕದಡಲು ಹಾಗೂ ಧರ್ಮಗಳ ನಡುವೆ ದ್ವೇಷ ಉಂಟಾಗಲು ಪ್ರಚೋದನೆ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.