ಜಿಲ್ಲೆ

ಬಾಲಕಿಯನ್ನು ಬೈಕಲ್ಲಿ ಸುತ್ತಾಡಿಸಿದಾತನ ಮೇಲೆ ಕೇಸ್

ಸೌಮ್ಯ ಆರ್

ಕಾಸರಗೋಡು: ಟ್ರೈನಿಂಗ್ ನರ್ಸಿಂಗ್ ಅಸಿಸ್ಟೆಂಟ್ ಆಗಿರುವ 17ರ ಹರೆಯದ ಬಾಲಕಿಯನ್ನು ಬೈಕಿನಲ್ಲಿ ಕರೆದೊಯ್ದು ವಿವಿಧೆಡೆ ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಆಸ್ಪತ್ರೆಯೊಂದರ ಆಪರೇಶನ್ ಥಿಯೇಟರ್ ನೌಕರ, ಮಲಪ್ಪುರಂ ನಿವಾಸಿ ಇಬಾನ್ ಮಹಮ್ಮದ್ ಎಂಬಾತನ ವಿರುದ್ಧ ಕಾಸರಗೋಡು ಮಹಿಳಾ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಕರೆದೊಯ್ದು ವಿವಿಧೆಡೆ ಸುತ್ತಾಡಿಸಿದ ಬಗ್ಗೆ ನಾಗರಿಕರು ನೀಡಿದ ದೂರಿನನ್ವಯ ಪೊಲೀಸರು ಈ ಕೇಸು ದಾಖಲಿಸಿಕೊಂಡಿದ್ದಾರೆ.