ಕವಿತಾಳ: ಕೊಟೆಕಲ್ ಗ್ರಾಮದಲ್ಲಿ ಯುವಕರು ಮೊಹರಂ ಹಬ್ಬದ ಅಂಗವಾಗಿ ಬಂಡಿಗಾಲಿಗೆ ಹೆಣೆದಿರುವ ಹಗ್ಗ ಬಿಚ್ಚುವ ಪಂದ್ಯ ಆಯೋಜಿಸಲಾಗಿದೆ.
ಸ್ಪರ್ಧಿಗಳು ಮುಖ ಕೆಳಗೆ ಮಾಡಿ ಹೆಜ್ಜೆ ಹಾಕುತ್ತಾ, ಹಾಡುತ್ತಾ ಹಗ್ಗ ಬಿಚ್ಚಬೇಕಾಗಿದೆ. ಪಂದ್ಯದಲ್ಲಿ ವಿಜೇತರಾದವರಿಗೆ ಆಯೋಜಕರು 11 ತೊಲ ಬೆಳ್ಳಿಯನ್ನು ಬಹುಮಾನವಾಗಿ ನೀಡಲಿದ್ದಾರೆ. ಹಗ್ಗ ಬಿಚ್ಚುವಲ್ಲಿ ವಿಫಲವಾಗುವ ತಂಡ ಆಯೋಜಕರಿಗೆ ಐದು ತೊಲ ಬೆಳ್ಳಿ ನೀಡಬೇಕಾಗಿದೆ. ಕೆಲವು ತಂಡಗಳು ಆಗಮಿಸಿದ್ದರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳದೆ ಹಿಂದಿರುಗಿದವು.
ಆಯೋಜಕರಾದ ಅಯ್ಯಪ್ಪ ಕರೆಗುಡ್ಡ, ರಾಜು ಪಿ., ಆದಪ್ಪ ಯದ್ದಲದೊಡ್ಡಿ, ಹೆಜ್ಜೆಮೇಳದ ಯುವಕರಾದ ಯಂಕನಗೌಡ, ಸುರೇಶ ಹೂಗಾರ, ಕನಕರಾಯ, ರಂಗಣ್ಣ, ಮೌನೇಶ, ಹನುಮಂತ, ಹನುಮಂತ ಕೆ., ಮಂಜುನಾಥ, ಅಶೋಕ, ಚಂದ್ರು, ಅಮರೇಶ, ಭೀಮಣ್ಣ ಮರಡಿ, ಕಾಂತ, ಮಲ್ಲೇಶ ಹೆಸರೂರು, ಪ್ರಮುಖರಾದ ಶಿವಲಿಂಗಪ್ಪ ವೀರಾಪುರ, ಭೀಮನಗೌಡ ಕೊಟೆಕಲ್, ಹನುಮಪ್ಪ ಕರೆಗುಡ್ಡ, ಶರಣಪ್ಪ ಡ್ರೈವರ್, ಹನುಮಂತರಾಯಗೌಡ, ರಮೇಶ ನಾಯಕ, ಅಂಜುನಾಯಕ ಇದ್ದರು.