ಜಿಲ್ಲೆ

ಕಾಮಗಾರಿಗಾಗಿ ರಥಬೀದಿ ರಸ್ತೆ ವಾಹನ ಸಂಚಾರ ನಿಷೇಧ

Dakshina Kannada

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಥಬೀದಿ ಮುಖ್ಯ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಳಚರಂಡಿ ಜಾಲ ಬದಲಾಯಿಸುವ ಮತ್ತು ರಸ್ತೆ ಕಾಮಗಾರಿ ನಡೆಯಲಿರುವುದರಿಂದ ಎರಡು ತಿಂಗಳು ವಾಹನ ಸಂಚಾರ ನಿಷೇಧಿಸಲಾಗಿದೆ. ಇದರಿಂದಾಗಿ ಸದಾ ವಾಹನ ದಟ್ಟಣೆ ಕಂಡುಬರುತ್ತಿದ್ದ ರಸ್ತೆ ಗುರುವಾರ ಖಾಲಿಖಾಲಿಯಾಗಿ ಕಂಡು ಬಂತು. ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳು ಸಂಚರಿಸದಂತೆ ತಡೆಯಲಾಗಿದೆ.