ಜಿಲ್ಲೆ

ಕೋಲಾರದಲ್ಲಿ ಕರೊನಾಗೆ ಒಬ್ಬ ಬಲಿ

Kolar

ಕೋಲಾರ: ಜಿಲ್ಲೆಯಲ್ಲಿ ಕರೊನಾಗೆ ಭಾನುವಾರ ಒಬ್ಬ ಬಲಿಯಾಗಿದ್ದು, 20 ಜನರಲ್ಲಿ ಸೋಂಕು ಪತ್ತೆಯಾಗಿದೆ. 7 ಮಂದಿ ಗುಣವಾಗುವುದರೊಂದಿಗೆ 159 ಸಕ್ರಿಯ ಪ್ರಕರಣಗಳಿವೆ.

ಬಂಗಾರಪೇಟೆ ಮೂಲದ ಅಕ್ಕಸಾಲಿಗ 46 ವರ್ಷದ ವ್ಯಕ್ತಿ ಬಲಿಯಾಗಿದ್ದು, ಸೋಂಕಿತನಿಗೆ ಆಂಧ್ರಪ್ರದೇಶ, ಬೆಂಗಳೂರು ಪ್ರಯಾಣದ ಇತಿಹಾಸವಿತ್ತು. ಹದಿನೈದು ದಿನಗಳಿಂದ ಖಾಸಗಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಸ್ತಮಾ ಸೇರಿ ಉಸಿರಾಟದ ಸಮಸ್ಯೆ ಇತ್ತು. ಬೆಳಗಿನ ಜಾವ ತೀವ್ರ ಅಸ್ವಸ್ಥನಾಗಿ ಕೊನೆಯುಸಿರೆಳೆದಿದ್ದಾನೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 4ಕ್ಕೇರಿದೆ.

20 ಸೋಂಕಿತರು: ಕೋಲಾರ ತಾಲೂಕಿನಲ್ಲಿ ಒಂದೇ ದಿನ 11 ಮಂದಿಗೆ ಕರೊನಾ ದೃಢಪಟ್ಟಿದ್ದು, ಬಂಗಾರಪೇಟೆ ಮತ್ತು ಮುಳಬಾಗಿಲಿನಲ್ಲಿ ತಲಾ 3 ಕೆಜಿಎಫ್‌ನಲ್ಲಿ 2 ಹಾಗೂ ಶ್ರೀನಿವಾಸಪುರದಲ್ಲಿ 1 ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 122 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 42 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಪಿ-36988 (30 ವರ್ಷ) ಪುರುಷ, ಪಿ-36920 (25 ವರ್ಷ) ಪಿ-36943 (26 ವರ್ಷ) ಪಿ-36964 (35 ವರ್ಷ) ಮಹಿಳೆಯರಿಗೆ ಕರೊನಾ ದೃಢಪಟ್ಟಿದೆ. ಪಿ-6907ರ ಸಂಪರ್ಕದಿಂದ ಮಹಿಳೆ (33 ವರ್ಷ), ಪಿ-16761ರ ಸಂಪರ್ಕದಿಂದ ಪುರುಷ (38 ವರ್ಷ), ಪಿ-18089ರ ಸಂಪರ್ಕದಿಂದ ಯುವತಿ (25 ವರ್ಷ), ಮಹಿಳೆ (49 ವರ್ಷ) ಹಾಗೂ ಯುವಕ (21 ವರ್ಷ) ಕರೊನಾ ಹರಡಿದೆ.

ವಿಷಮ ಶೀತ ಜ್ವರದಿಂದ ಕೋಲಾರದ ಪುರುಷ ಪಿ-36991(29 ವರ್ಷ), ಯುವತಿ ಪಿ-37023(20 ವರ್ಷ), ಮುಳಬಾಗಿಲಿನಲ್ಲಿ ವಿಷಮ ಶೀತ ಜ್ವರದಿಂದ ಮಹಿಳೆ ಪಿ-36907 (52 ವರ್ಷ) ಕೆಜಿಎಫ್ ಯುವಕ ಪಿ-36916 (22 ವರ್ಷ), ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆಯಲ್ಲಿ ಪುರುಷ ಪಿ-37010 (41 ವರ್ಷ) ಆರೋಗ್ಯ ಕಾರ್ಯಕರ್ತೆ ಪಿ-37034 (27 ವರ್ಷ) ಸೋಂಕು ಪತ್ತೆಯಾಗಿದೆ.

ಬಂಗಾರಪೇಟೆಯಲ್ಲಿ ಪಿ-14,433ರ ಸಂಪರ್ಕದಿಂದ ಪುರುಷ ಪಿ-36927, ವಿಷಮ ಶೀತಜ್ವರದಿಂದ ಬಾಲಕ ಪಿ-36933(11), ಪುರುಷ ಪಿ-37038( 47ವರ್ಷ), ಕೆಜಿಎಫ್‌ನ ಪಿ-19796ರ ಸಂಪರ್ಕದಿಂದ ಮಹಿಳೆ (49) ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಶ್ರೀನಿವಾಸಪುರದಲ್ಲಿ ವಿಷಮ ಶೀತಜ್ವರದಿಂದ ಬಳಲುತ್ತಿರುವ 58 ವರ್ಷದ ಮಹಿಳೆ ಬೆಂಗಳೂರಿನ ಜಿಂಜರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

7 ಮಂದಿ ಗುಣಮುಖ: ಕೋಲಾರ, ಮುಳಬಾಗಿಲು ಹಾಗೂ ಶ್ರೀನಿವಾಸಪುರದಲ್ಲಿ ತಲಾ ಒಬ್ಬ ಸೋಂಕಿತರು, ಮಾಲೂರು ಮತ್ತು ಕೆಜಿಎಫ್‌ನ ಇಬ್ಬರು ಕರೊನಾಮುಕ್ತರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಗುಣಮುಖರಾದವರ ಸಂಖ್ಯೆ 124ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 159 ಇದೆ.

ಇನ್ನಿಬ್ಬರು ಸಾವು: ಕೋಲಾರ ಸಾರಿಗೆ ನಗರದ 70 ವರ್ಷದ ವೃದ್ಧ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಗಂಟಲು ದ್ರವ ಮಾದರಿ ಸಂಗ್ರಹಿಸಿ ವರದಿಗೆ ಕಾಯಲಾಗುತ್ತಿದೆ. ಬೆಂಗಳೂರು ಪ್ರಯಾಣ ಹಿನ್ನೆಲೆಯಿಂದ ಬಂದಿದ್ದ 47 ವರ್ಷದ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವರದಿ ನಿರೀಕ್ಷೆಯಲ್ಲಿದೆ.

ಗರ್ಭಿಣಿಗೆ ಪಾಸಿಟಿವ್: ಮಾಲೂರು ತಾಲೂಕು ಟೇಕಲ್‌ನ ನೂಟುವೆ ಗ್ರಾಪಂ ವ್ಯಾಪ್ತಿಯ ತೊರಲಕ್ಕಿ ಗ್ರಾಮದಲ್ಲಿ 20 ವರ್ಷದ ಗರ್ಭಿಣಿಗೆ ಕರೊನಾ ದೃಢಪಟ್ಟಿದೆ. ಗರ್ಭಿಣಿ 15 ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಬಂದಿದ್ದರಿಂದ ಜು.5ರಂದು ಗಂಟಲದ್ರವ ಮಾದರಿಯನ್ನು ತೊರಲಕ್ಕಿ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗಿದ್ದು, ಭಾನುವಾರ ವರದಿ ಬಂದಿದೆ. ಕುಟುಂಬದ 5 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ