ಜಿಲ್ಲೆ

ಸಮರ್ಥ ನಾಯಕರಾಗಬೇಕೇ ಹೊರತು ಖಳನಾಯಕರಲ್ಲ : ಕನ್ನಡ ಉಪನ್ಯಾಸಕ ಸುನೀಲ್ ಪಲ್ಲಮಜಲು ಕಿವಿಮಾತು

ಸೌಮ್ಯ ಆರ್

ಬಂಟ್ವಾಳ: ನಾಯಕ ಸರಿದಾರಿಯಲ್ಲಿ ನಮ್ಮನ್ನು ಮುನ್ನಡೆಸದಿದ್ದಲ್ಲಿ ನಾವು ಸಮರ್ಥ ನಾಯಕರಾಗಬೇಕೇ ಹೊರತು ಖಳನಾಯಕರಲ್ಲ ಎಂದು ಮೊಡಂಕಾಪು ಕಾಮೇಲ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸುನೀಲ್ ಪಲ್ಲಮಜಲು ಹೇಳಿದರು.

ಕಾಲೇಜಿನಲ್ಲಿ 2025-26ನೇ ಸಾಲಿನ ಕಾರ್ಮೆಲ್ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆ ಜಂಟಿ ಕಾರ್ಯದರ್ಶಿ ಮರಿಯಾ ಪ್ರಿಯಾ ಎ.ಸಿ., ಸಂದ ಸಲಹೆಗಾರ ಸುರೇಶ್ ನಂದೊಟ್ಟು, ವಿದ್ಯಾ, ಕ್ಯಾರಲ್ ಲೋಬೊ ಮೊದಲಾದವರಿದ್ದರು. ಅಧ್ಯಕ್ಷೆ ವಿದ್ಯಾ ಸ್ವಾಗತಿಸಿದರು. ಪ್ರಾಚಾರ್ಯೆ ಫೆಲ್ಸಿಟಾ ಎ.ಸಿ. ಪ್ರ ಮಾಣವಚನ ಬೋಧಿಸಿದರು. ಪ್ರಜ್ಞಾ ನಿರೂಪಿಸಿದರು. ಕಾರ್ಯದರ್ಶಿ ಐಶೆಲ್ ವಂದಿಸಿದರು.