ಜಿಲ್ಲೆ

ವ್ಯಂಗ್ಯಚಿತ್ರಗಾರನಿಗೆ ಹಾಸ್ಯಪ್ರಜ್ಞೆ ಮುಖ್ಯ : ಪತ್ರಕರ್ತ ವಿರಾಜ್ ಅಡೂರು ಅಭಿಪ್ರಾಯ

ಸೌಮ್ಯ ಆರ್

ಬದಿಯಡ್ಕ: ವ್ಯಂಗ್ಯಚಿತ್ರ ಕಲೆ ಕರಗತವಾಗಬೇಕಾದರೆ ಭಾವಪೂರ್ಣ ಚಿತ್ರ ರಚನೆಯ ಜತೆಗೆ ಹಾಸ್ಯಪ್ರಜ್ಞೆಯೂ ಬೇಕು. ವಿಚಾರಗಳ ಮಂಡನೆಯೂ ಶಕ್ತಿಯುತವಾಗಿರಬೇಕು ಎಂದು ವ್ಯಂಗ್ಯಚಿತ್ರಗಾರ, ಪತ್ರಕರ್ತ ವಿರಾಜ್ ಅಡೂರು ಹೇಳಿದರು.

ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ವ್ಯಂಗ್ಯಚಿತ್ರ ರಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಾತನಾಡಿದರು.

ಶ್ರೀ ಭಾರತೀ ವಿದ್ಯಾಪೀಠದ ಮುಖ್ಯಶಿಕ್ಷಕ ಪಿ.ಸತ್ಯನಾರಾಯಣ ಶರ್ಮ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ಕಾರ್ಟೂನ್ ಚಿತ್ರಗಳ ಪ್ರತಿಯೊಂದು ಗೆರೆಗಳೂ ಕೂಡಾ ಸೂಕ್ಷ್ಮಸಂವೇದಿ. ಗೆರೆಗಳ ಮೂಲಕ ವಿಚಾರಗಳ ಅನಾವರಣ ಅದ್ಭುತ ಎಂದರು.

ಶಿಬಿರದಲ್ಲಿ ಭಾಗವಹಿಸಿದ್ದ ಅವ್ಯಂಗ್, ವಂಶಿ, ತಸ್ವಿ ಅನಿಸಿಕೆ ಹಂಚಿಕೊಂಡರು. ಶಿಕ್ಷಕಿ ಮಮತಾ ಸಾವಿತ್ರಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ವಂದಿಸಿದರು. ಶಿಬಿರದಲ್ಲಿ 30ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು.