ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಕಾಗಿರ್ಲ್ ಸ್ತೂಪದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ 32ನೇ ಪುಣ್ಯ ಸ್ಮರಣೆಯನ್ನು ಕಾಗಿರ್ಲ್ ಸ್ತೂಪ ಸಮಿತಿ ವತಿಯಿಂದ ಬುಧವಾರ ಆಚರಿಸಲಾಯಿತು.
ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರು ಮಾತನಾಡಿ, ಕಾರಿಯಪ್ಪ ಅವರು ದೇಶಕ್ಕಾಗಿ ನೀಡಿದ ಕೊಡುಗೆ ಅಪಾರ. ಅವರ ಧೈರ್ಯ, ಶೌರ್ಯ ಹಾಗೂ ಸಹಾಸ ಸ್ಮರಣೀಯ. ಇಂದಿನ ಯುವಕರಿಗೆ ಕಾರಿಯಪ್ಪ ಅವರ ಕಾರ್ಯ ಸ್ಪೂತಿರ್ಯಾಗಿದ್ದು, ದೇಶಪ್ರೇಮ ಬೆಳೆಸಿಕೊಳ್ಳಬೇಕು. ಏಕತೆ ಮತ್ತು ಸಮಗ್ರತೆಗಾಗಿ ಹೋರಾಡಿ ದೇಶ ಕಟ್ಟುವ ಕೆಲಸ ಮಾಡಬೇಕು. ಇದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಅಧ್ಯತೆ ವಹಿಸಿದ್ದರು. ಸಹ ಕಾರ್ಯದಶಿರ್ ವಸಂತ ಅರ್ಕಾಚಾರ, ಸದಾನಂದ ಡಂಗನವರ, ಉದಯ ಯಂಡಿಗೇರಿ, ಮಹಾಂತೇಶ ಲಿಂಬಣ್ಣದೇವರಮಠ, ಎನ್.ಎಸ್. ಪಾಟೀಲ, ಪ್ರಕಾಶ ದೊಡ್ಡವಾಡ, ಮಾಜಿ ಸೈನಿಕರಾದ ಸಿಕಂದರ ನದಾ್, ಭೀಮಪ್ಪ ಜಾಧವ, ವೆಂಕಟೇಶ ವೇರ್ಣೆಕರ, ಚಂದ್ರಕಾಂತ ಇಟಗಿ, ಇತರರು ಇದ್ದರು.