ಪರಶುರಾಮಪುರ: ಸಣ್ಣ ಕಾಯಿಲೆಗಳ ಕುರಿತು ನಿರ್ಲಕ್ಷೃ ವಹಿಸಿದರೆ ಆರೋಗ್ಯದ ಜತೆಗೆ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಡಾ.ಜಯಲಕ್ಷ್ಮೀ ಎಚ್ಚರಿಸಿದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಿವಿ, ಮೂಗು, ಗಂಟಲು ರೋಗಗಳಿಗೆ ಉಚಿತ ಚಿಕಿತ್ಸೆ, ಔಷಧ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲೂ ಸಹ ಗ್ರಾಮೀಣರು ಕಿವಿ, ಮೂಗು, ಗಂಟಲಿನ ರೋಗಗಳನ್ನು ನಿರ್ಲಕ್ಷಿಸಿ ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರವಿ ಮಾತನಾಡಿದರು. ಆರೋಗ್ಯ ಇಲಾಖೆಯ ಅನುಸೂಯಾದೇವಿ, ಸಿಎಚ್‌ಒಗಳಾದ ನರಸರೆಡ್ಡಿ, ನರಸಿಂಹಸ್ವಾಮಿ, ದಿವ್ಯಾ, ಲೇಪಾಕ್ಷಿ, ದಯಾನಂದ್, ಭರತ್, ಗೀತಾ, ಮೋಹಿನಿ, ಮಂಜುನಾಥ ಇದ್ದರು.
ಜಿಲ್ಲಾ-ತಾಲೂಕು ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಶಿಬಿರ ಆಯೋಜಿಸಲಾಗಿತ್ತು.