ಸಿರಗುಪ್ಪ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ದಿನ ಕಾರ್ಯಕ್ರಮದಲ್ಲಿ ಉಪವಿಭಾಗದ ಡಿವೈಎಸ್ಪಿ ಸಂತೋಷ್ ಚೌಹಾಣ್ ಮಾತನಾಡಿದರು. ಪಿಎಸ್‌ಐ ಪರಶುರಾಮ, ಪ್ರಾಚಾರ್ಯ ಬಿ.ಹರೀಶ, ಉಪನ್ಯಾಸಕರಾದ ಆರ್.ವೀರೇಶ, ರಂಗಣ್ಣ, ಗಂಗಾಧರ, ಹನುಮಂತಮ್ಮ, ಸಕ್ರಪ್ಪ ಇತರರಿದ್ದರು. 
ಜಿಲ್ಲೆ

ವೃತ್ತಿ ಜೀವನ-ಸಮಾಜದ ಮೇಲೆ ಪರಿಣಾಮ

Kopala - Desk - Eraveni

ಸಿರಗುಪ್ಪ: ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಅರಿವು ಮೂಡಿಸುವ ದೃಷ್ಟಿಯಿಂದ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಲಾಗುತ್ತದೆ ಎಂದು ಸಿರಗುಪ್ಪ ಉಪವಿಭಾಗದ ಡಿವೈಎಸ್ಪಿ ಸಂತೋಷ ಚೌಹಾಣ್ ಹೇಳಿದರು.

ಪಟ್ಟಣದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ದಿನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ದ್ರವ್ಯದ ಚಟಕ್ಕೆ ಬಲಿಯಾಗಿದ್ದಾರೆ.

ಹದಿಹರೆಯದವರಲ್ಲಿ ಮಾದಕ ವ್ಯಸನದ ಚಟ ಹೆಚ್ಚುತ್ತಿದ್ದು, ಸಮಾಜದ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಇದರಿಂದ ಯುವ ಜನತೆಯ ಆರೋಗ್ಯ ಮತ್ತು ವೃತ್ತಿ ಜೀವನದ ಜತೆಗೆ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

ಅಪರಿಚಿತ ವ್ಯಕ್ತಿಗಳಿಂದ ಬರುವ ದೂರವಾಣಿ ಕರೆ ಹಾಗೂ ಮೆಸೇಜ್‌ಗಳಿಗೆ ಉತ್ತರಿಸಬಾರದು ಹಾಗೂ ಒಟಿಪಿ ನಂಬರ್ ಹಂಚಿಕೊಳ್ಳಬಾರದು. ಇದರಿಂದ ಸೈಬರ್ ಕಳ್ಳರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಲೂಟಿ ಮಾಡುತ್ತಾರೆ. ಸೈಬರ್ ಕ್ರೈಂ ಮೂಲಕ ಹಣವನ್ನು ಕಳೆದುಕೊಂಡಾಗ ಸಹಾಯವಾಣಿ 1930 ಅಥವಾ 112 ಕರೆ ಮಾಡಿ ದೂರು ದಾಖಲಿಸಬೇಕು ಎಂದರು.