ಕೊಕ್ಕರ್ಣೆ: ಬಾರ್ಕೂರು ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜು ವತಿಯಿಂದ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಸೇಂಟ್ ಅಲೋಶಿಯಸ್ ಕಾಲೇಜು ನಿವೃತ್ತ ಉಪಪ್ರಾಂಶುಪಾಲ ರೋನಾಲ್ಡ್ ಪಿಂಟೊ ಮಾತನಾಡಿ, ಪದವಿ ಪೂರ್ವ ಕಾಲೇಜು ನಂತರದ ವಿವಿಧ ಅವಕಾಶ, ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ನಾಯಕ್, ಕಾರ್ಯದರ್ಶಿ ಐವನ್ ದೊನಾತ್ ಸುವಾರಿಸ್ ಉಪಸ್ಥಿತರಿದ್ದರು.