ಜಿಲ್ಲೆ

ವಾಣಿಜ್ಯ ವಿಭಾಗದ ಭವಿಷ್ಯ ಉಜ್ವಲ : ರಘುಪತಿ ಎಸ್.ಭಟ್ ಹೇಳಿಕೆ

ಸೌಮ್ಯ ಆರ್

ಮೂಡುಬಿದಿರೆ: ಎರಡು ದಶಕಗಳ ಹಿಂದೆ ಇದ್ದಷ್ಟು ಕಷ್ಟ ಈಗಿಲ್ಲ, ಈಗ ಸರಿಯಾದ ವೃತ್ತಿಯಲ್ಲಿ ಮುಂದೆ ಸಾಗುವುದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಮಾರ್ಗದರ್ಶನ ನೀಡುವ ತಜ್ಞರಿದ್ದಾರೆ. ವಾಣಿಜ್ಯ ವಿಭಾಗದ ಭವಿಷ್ಯ ಉಜ್ವಲವಾಗಿದೆ ಎಂದು ಹಿರಿಯ ಚಾರ್ಟೆಡ್ ಅಕೌಂಟೆಂಟ್ ರಘುಪತಿ ಎಸ್.ಭಟ್ ಹೇಳಿದರು.

ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.

ಪಿಪಿಕೆ ಅಸೋಷಿಯೇಟ್ಸ್ ಮುಖ್ಯಸ್ಥ ಸಿಎ ಪ್ರಶಾಂತ್ ಪೈ, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಖಿತಾ ಸ್ವಾಗತಿಸಿದರು. ಅದಿತಿ ನಿರೂಪಿಸಿದರು.