ಕಡೂರು: ಆಯುಷ್ಮ್ಮಾನ್‌ಭವ ಯೋಜನೆಯನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು ಎಂದು ತಾಪಂ ಇಒ ಸಿ.ಆರ್.ಪ್ರವೀಣ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಬುಧವಾರ ಆಯುಷ್ಮಾನ್‌ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಯುಷ್ಮಾನ್‌ಭವ ಯೋಜನೆಯನ್ನು ಗ್ರಾಮ ಮಟ್ಟದಲ್ಲೂ ಅನುಷ್ಠಾನಗೊಳಿಸಲು ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ. ಗ್ರಾಪಂಗಳಲ್ಲಿ ಆರೋಗ್ಯ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಸಿ.ಎಸ್.ರವಿಕುಮಾರ್ ಮಾತನಾಡಿ, ಆಯುಷ್ಮ್ಮಾನ್‌ಭವ ಕಾರ್ಡ್ ಪ್ರತಿ ಮನೆಗೆ ತಲುಪಿಸಲಾಗುವುದು. ಕಾರ್ಡ್‌ನಿಂದ ಹೃದಯ ಸಂಬಂಧಿ ಹಾಗೂ ಕಿಡ್ನಿ ಸಮಸ್ಯೆಗಳಿಗೆ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಲಿದೆ. ಆಂದೋಲನದ ಮಾದರಿಯಲ್ಲಿ ಮನೆಗಳಿಗೆ ಕಾರ್ಡ್ ತಲುಪಲಿದೆ ಎಂದರು.
2025ಕ್ಕೆ ಕ್ಷಯ ಮುಕ್ತ ಭಾರತವನ್ನಾಗಿಸಲು ಶ್ರಮಿಸಲಾಗುತ್ತಿದೆ. ದಡಾರ ಮತ್ತು ರುಬೆಲ್ಲಾಗಳನ್ನೂ ಡಿಸೆಂಬರ್ ಒಳಗೆ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ಕಾರ್ಡ್‌ನ್ನು ಗ್ರಾಮ ಒನ್ ಅಡಿಯಲ್ಲಿ ಪಡೆಯಬಹುದು ಎಂದರು.
ಆಯುಷ್ಮಾನ್ ವಿಭಾಗದ ಅಧಿಕಾರಿ ಈಶ್ವರ್, ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಪ್ರಸನ್ನ, ದೇವರಾಜ್ ಇದ್ದರು.