ಕಾರಟಗಿ ಪಶು ಆಸ್ಪತ್ರೆ ಪಕ್ಕದ ಕಟ್ಟಡಕ್ಕೆ ಬಾಗಿಲು ಅಳವಡಿಸಿ, ಬೀಗ ಹಾಕಿರುವುದು. 
ಜಿಲ್ಲೆ

ಕಾರಟಗಿ ಅಭದ್ರ ಕಟ್ಟಡಕ್ಕೆ ಸಿಕ್ತು ಬಾಗಿಲು ಯೋಗ

ಕಾರಟಗಿ: ಪಟ್ಟಣದ ಪಶು ಆಸ್ಪತ್ರೆ ಪಕ್ಕದ ಅಭದ್ರ ಕಟ್ಟಡಕ್ಕೆ ಶನಿವಾರ ಪಶು ಇಲಾಖೆ ಅಧಿಕಾರಿಗಳು ಬಾಗಿಲು ಅಳವಡಿಸಿ ಕೊಠಡಿಯಲ್ಲಿದ್ದ ಬೆಲೆಬಾಳುವ ಸಿರಿಂಜ್‌ಗಳಿಗೆ ಭದ್ರತೆ ಒದಗಿಸಿದ್ದಾರೆ.

ಬಾಗಿಲುಗಳಿಲ್ಲದ ಕಟ್ಟಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಸಿರಿಂಜ್ ಸಂಗ್ರಹಿದ್ದು ಸಾರ್ವಜನಿಕ ವಲಯದಲ್ಲಿ ತೀರಾ ಚರ್ಚೆಗೆ ಗ್ರಾಸವಾಗಿತ್ತು. ಗ್ರಾಮೀಣ ಪ್ರದೇಶದ ಪಶು ಚಿಕಿತ್ಸಾ ಕೇಂದ್ರಗಳಿಗೆ ಸರಬರಾಜಾಗಬೇಕಿದ್ದ ಸಿರಿಂಜ್‌ಗಳನ್ನು ಅಭದ್ರ ಕಟ್ಟಡದಲ್ಲಿಟ್ಟು ಕಳುವಾದರೆ ಯಾರು ಹೋಣೆ ಎಂಬ ಪ್ರಶ್ನೆ ಜನರದ್ದಾಗಿತ್ತು.

ಈ ಕುರಿತು ನ.23 ರಂದು ವಿಜಯವಾಣಿ ಪತ್ರಿಕೆ ‘ಅಭದ್ರ ಕಟ್ಟಡದಲ್ಲಿ ಸಿರಿಂಜ್ ಸಂಗ್ರಹ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಪಶು ಇಲಾಖೆ ಅಧಿಕಾರಿಗಳು, ಅಭದ್ರ ಕೊಠಡಿಗೆ ಬಾಗಿಲು ಅಳವಡಿಸಿ ಸಿರಿಂಜ್‌ಗಳ ರಕ್ಷಣೆಗಾಗಿ ಬೀಗ ಹಾಕಿದ್ದಾರೆ.