ಜಿಲ್ಲೆ

9 ಕೋಟಿ ಮೌಲ್ಯದ ಕಾರಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ! ವಿಡಿಯೋ ವೈರಲ್​.. Lamborghini Aventador

Lamborghini Aventador: 9 ಕೋಟಿ ಮೌಲ್ಯದ ಲ್ಯಾಂಬೋರ್ಘಿನಿ ಅವೆಂಟಡಾರ್ ಐಷರಾಮಿ ಕಾರೊಂದು ಶನಿವಾರ (ಆ.02) ರಂದು ನಡುರಸ್ತೆಯಲ್ಲಿ ಹೊತ್ತಿಯುರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ನಡೆಯುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್​ ಆಗಿದ್ದು, ಕಾರಿನ ಮಾಲೀಕ ಇನ್​ಸ್ಟಾಗ್ರಾಮ್​ನಲ್ಲಿ ನಿಮ್ಮ ಮಗ ಸಂಜು ಎಂದು ಜನಪ್ರಿಯವಾಗಿರುವ ಸಂಜೀವ್​ ಅವರದ್ದು ಎಂದು ತಿಳಿದುಬಂದಿದಿದೆ.

ವಿಡಿಯೋದಲ್ಲೇನಿದೆ?

ಕಿತ್ತಳೆ ಬಣ್ಣದ ಐಷಾರಾಮಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಹಿಂಭಾಗದಿಂದ ಹೊಗೆ ಬರುತ್ತಿದೆ. ಇನ್ನು ಕಾರು ಮಾಲೀಕನಿಗೆ ಸಹಾಯ ಮಾಡಲು ಅಲ್ಲಿನ ಸ್ಥಳೀಯರು ಆಗಮಿಸಿ, ಅಗ್ನಿ ಶಾಮಕ ಯಂತ್ರವನ್ನು ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.

ಅದೃಷ್ಟವಶಾತ್​ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಆರಂಭಿಕ ವರದಿಗಳಲ್ಲಿ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಸೂಚಿಸಿದ್ದವು. ಆದರೆ, ಸಂಜೀವ್​ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸೃಷ್ಟೀಕರಣವನ್ನು ಪೋಸ್ಟ್​ ಮಾಡಿ ಅಲ್ಪ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಬೆಂಕಿಗೆ ನಿಖರವಾದ ಕಾರಣ ಏನೆಂದು ಅಧಿಕಾರಿಗಳು ಇನ್ನೂ ಧೃಢಪಡಿಸಿಲ್ಲ. ಈ ರೀತಿಯ ಐಷರಾಮಿ ಕಾರುಗಳು ಗಂಟೆಗೆ 300 ಕಿಮೀ. ಹೆಚ್ಚಿನ ವೇಗವನ್ನು ತಲುಪಬಲ್ಲವು, ಅವುಗಳ ಎಂಜಿನ್​ಗಳು ಹಿಂಭಾಗದಲ್ಲಿರುವುದರಿಂದ ಅಧಿಕ ಬಿಸಿಯಾಗುವುದರಿಂದ  ಅಪಾಯಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. (ಏಜೆನ್ಸೀಸ್​)