ಲಿಂಗಸುಗೂರಿನಲ್ಲಿ ನಡೆದ ಅಪಘಾತದಲ್ಲಿ ಕಾರು ಜಖಂಗೊಂಡಿರುವುದು. 
ಜಿಲ್ಲೆ

ಕಾರಿನ ಟಯರ್ ಸ್ಫೋಟ, ಒಬ್ಬ ಸಾವು

ಲಿಂಗಸುಗೂರು: ತಾಲೂಕಿನ ಅಮರೇಶ್ವರ ಕ್ರಾಸ್‌ನಿಂದ ದೇವರಭೂಪುರ ಗ್ರಾಮದ ಮಾರ್ಗ ಮಧ್ಯೆ ಗುರುವಾರ ಸಂಜೆ ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡು ಪಲ್ಟಿಯಾಗಿ ಒಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ದೇವರಭೂಪುರ ಗ್ರಾಮದ ತಿಮ್ಮನಗೌಡ (32) ಮೃತ. ಅಮರೇಶ ಮತ್ತು ಶಂಕರಗೌಡ ಎಂಬುವರಿಗೆ ಗಾಯಗಳಾಗಿದ್ದುಮ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.