ಸವಣೂರ: ಇನೋವಾ ಕಾರು ಮಾರಾಟ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬನ 10 ಲಕ್ಷ ರೂ. ಹಣವನ್ನು ದೋಚಿರುವ ಟನೆ ಇಲ್ಲಿಯ ತಾಲೂಕು ಕ್ರೀಡಾಂಗಣದ ಬಳಿ ಬುಧವಾರ ನಡೆದಿದೆ.
ಹಾವೇರಿಯ ಇಲಿಯಾಸಅಹ್ಮದ್ ದಾವೂದಸಾಬ ಮೊರಟಗಿ (47) ಎಂಬುವರ ಹಣ ದೋಚಿರುವುದು.
ಇವರಿಗೆ ೋನ್ ಮೂಲಕ ಕರೆ ಮಾಡಿದ ಮೂವರು ಅಪರಿಚಿತರು ನಮ್ಮ ಇನೋವಾ ಕಾರು ಮಾರಾಟ ಮಾಡುವುದಿದೆ. 10 ಲಕ್ಷ ರೂ. ತೆಗೆದುಕೊಂಡು ಬಂದು ಕಾರು ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಅದರಂತೆ ಇಲಿಯಾಸಅಹ್ಮದ್ ಹಣ ತೆಗೆದುಕೊಂಡು ತನ್ನ ಕಾರಿನಲ್ಲಿ ಸವಣೂರ ತಾಲೂಕು ಕ್ರೀಡಾಂಗಣದ ಬಳಿ ಬಂದಾಗ ಆತನ ಗಮನ ಬೇರೆಡೆ ಸೆಳೆದ ಖದೀಮರು ಆತನ ಕಾರಿನಲ್ಲಿದ್ದ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.