ಜಿಲ್ಲೆ

ಹಳ್ಳಕ್ಕೆ ಬಿದ್ದ ಕಾರು, ಸ್ಥಳದಲ್ಲಿಯೇ ಚಾಲಕ ಸೇರಿ ಮೂವರ ಸಾವು

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ನಗರಗೆರೆ ಬಳಿ ಅತಿ ವೇಗದ ಚಾಲನೆಯಲ್ಲಿ ಹಳ್ಳಕ್ಕೆ ಕಾರು ಬಿದ್ದು ಸ್ಥಳದಲ್ಲಿಯೇ ಚಾಲಕ ಸೇರಿ ಮೂವರು ಮೃತಪಟ್ಟಿದ್ದು ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ.

ಬೆಸ್ಕಾಂ ಸಿಬ್ಬಂದಿ ವೇಣಗೋಪಾಲ್ (36) ಹಾಗೂ ಶ್ರೀಧರ್ (34) ಮತ್ತು ಮಂಜಪ್ಪ (34೪) ಮೃತರು. ಕಾರಿನಲ್ಲಿದ್ದ ಶಿವಕುಮಾರ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದ್ಯುತ್ ದುರಸ್ತಿ ಕೆಲಸ ಮುಗಿಸಿ ರಾತ್ರಿ ನಗರಗೆರೆಯಿಂದ ವಾಟದಹೊಸಹಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ವಾಹನ ನಿಯಂತ್ರಣ ತಪ್ಪಿ, ಹಳ್ಳಕ್ಕೆ ಉರುಳಿ ಬಿದ್ದಿದೆ. ಇದರ ರಭಸಕ್ಕೆ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ. ಬೆಳಿಗ್ಗೆ ದಾರಿಹೋಕರು ಕಾರು ಬಿದ್ದಿರುವುದನ್ನು ಕಂಡು ತಕ್ಷಣ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಹೋಗಿ ಪರಿಶೀಲಿಸಿದಾಗ ಕಾರಿನಲ್ಲಿದ್ದ ಗಾಯಾಳು ಶಿವಕುಮಾರ್ ಜತೆಗೆ ಮೂರು ಮೃತದೇಹಗಳು ಪತ್ತೆಯಾಗಿವೆ.

ಅಪಘಾತಕ್ಕೆ ಅತಿ ವೇಗದ ಚಾಲನೆ ಮತ್ತು ಚಾಲಕ ಪಾನಮತ್ತರಾಗಿದ್ದೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಅತಿವೇಗವಾಗಿ ಸಾಗುತ್ತಿದ್ದ ಕಾರು ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ, ಉರುಳಿ ಬಿದ್ದಿದೆ.