ಉಡುಪಿ: ಪರ್ಕಳ ಈಶ್ವರನಗರದಲ್ಲಿರುವ ನಗರ ಸಭೆ ಪಂಪ್ ಹೌಸ್ಗೆ ಭಾನುವಾರ ಮಧ್ಯರಾತ್ರಿ ಕಾರು ಡಿಕ್ಕಿ ಹೊಡೆದ ಪರಿಣಾಮ ಹಾನಿ ಸಂಭವಿಸಿದೆ.
ಮಣಿಪಾಲ ಕಡೆಯಿಂದ ಅತಿವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಂಪ್ ಹೌಸ್ಗೆ ಡಿಕ್ಕಿ ಹೊಡೆದಿದ್ದು, ಪಂಪ್ ಹೌಸ್ನಲ್ಲಿದ್ದ ಸಿಬ್ಬಂದಿ ಮೂತ್ರಕ್ಕೆ ಎದ್ದು ಹೋಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದು, ಯಾವುದೇ ಗಾಯವಾಗಿಲ್ಲ. ಕಾರು ಮುಂಭಾಗ ಸಂಪೂರ್ಣ ನುಜ್ಜಾಗಿದ್ದು, ಪಂಪ್ ಹೌಸ್ಗೂ ತುಂಬಾ ಹಾನಿಯಾಗಿದೆ. ನಗರಸಭಾ ಪೌರಾಯುಕ್ತರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಾರಿನಲ್ಲಿ ಹಾನಿಯಾದ ಭಾಗವನ್ನು ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರಿಂದ ಪ್ರಕರಣ ದಾಖಲಾಗಿಲ್ಲ.
ಅಪಾಯಕಾರಿ ಹೆದ್ದಾರಿ
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಹಳೆ ರಸ್ತೆಯಲ್ಲಿ ವಾಹನಗಳು ಸಾಗಬೇಕಿದೆ. ಆದರೆ ಈ ಬಗ್ಗೆ ಯಾವುದೇ ಸೂಚನಾ ಫಲಕ ಇಲ್ಲ. ಇದರಿಂದ ಕೆಲವು ವಾಹನ ಸವಾರರು ಗೊಂದಲಕ್ಕೆ ಒಳಗಾಗಿ ಅಪಘಾತ ಸಂಭವಿಸುತ್ತಿದೆ. ಕೆಲವು ದಿನದ ಹಿಂದೆಯೂ ಎರಡು ಕಾರುಗಳ ಅಪಘಾತ ಸಂಭವಿಸಿತ್ತು. ನಗರಸಭೆಯ ಪಂಪ್ ಹೌಸಿಗೂ ಸೂಕ್ತ ಬೇಲಿ ಇಲ್ಲ.