ಜಿಲ್ಲೆ

ಕಾರಿನಿ ಇಂಜಿನ್‌ನಲ್ಲಿ ಬೆಂಕಿ

ಎನ್.ವೆಂಕಟೇಶ್

ಚಿಕ್ಕಬಳ್ಳಾಪುರ: ತಾಲೂಕಿನ ಗೋಪಿನಾಥ ಬೆಟ್ಟದಲ್ಲಿ ದೇವಸ್ಥಾನದ ನಿಲುಗಡೆಯ ಸ್ಥಳದಲ್ಲಿ ಕಾರಿಗೆ ಬೆಂಕಿ ಹೊತ್ತ್ತಿಕೊಂಡು ಕೆಲಕಾಲ ಆತಂಕ ಮೂಡಿಸಿತ್ತು. ಹೋಳಿ ಹುಣ್ಣಿಮೆ ಅಂಗವಾಗಿ ದೇವರ ದರ್ಶನ ಪಡೆಯಲು ಶುಕ್ರವಾರ ಮಧ್ಯಾಹ್ನ ಬಂದಿದ್ದ ಯಲಹಂಕದ ನರಸಿಂಹಮೂರ್ತಿ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣವೇ ಸ್ಥಳೀಯರು ಪರಿಶೀಲಿಸಿದಾಗ ಇಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಇದಕ್ಕೆ ನೀರು ಹಾಕಿ ನಂದಿಸಲಾಗಿದೆ. ನಂದಿ ಗಿರಿಧಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.