ಜಿಲ್ಲೆ

ಯಾವುದೋ ಕಾರಣಕ್ಕೆ ಕಾರು ಚಾಲಕ ವಿಷ ಸೇವಿಸಿ ಸಾವು

Haveri - Kariyappa Aralikatti

ಹಾವೇರಿ: ಯಾವುದೋ ಕಾರಣಕ್ಕೆ ಮನಸ್ಸಿಗೆ ಬೇಸರ ಮಾಡಿಕೊಂಡ ಕಾರು ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಲಾಡ್ಜ್​ವೊಂದರಲ್ಲಿ ನಡೆದಿದೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದ ಮಹಾಂತೇಶ ಕಲ್ಲಪ್ಪ ಕಲ್ಲಣ್ಣನವರ (27) ಮೃತ ವ್ಯಕ್ತಿ.

ಈತ ದಾವಣಗೆರೆಯಲ್ಲಿ 6 ತಿಂಗಳಿಂದ ಕಾರು ಓಡಿಸಿಕೊಂಡಿದ್ದ. ಯಾವುದೋ ಕಾರಣಕ್ಕೆ ನಗರದ ಲಾಡ್ಜ್​ವೊಂದರಲ್ಲಿ ರೂಮ್​ ಮಾಡಿಕೊಂಡ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.