ಜಿಲ್ಲೆ

ಬಸ್ ಡಿಕ್ಕಿಯಾಗಿ ಕಾರು ಚಾಲಕ ಸಾವು

ಮಾದೇಶ್ ತಿ.ನರಸೀಪುರ

ಚನ್ನರಾಯಪಟ್ಟಣ: ತಾಲೂಕಿನ ಉಪ್ಪಿನಹಳ್ಳಿ ಗೇಟ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಲ್ಟೋ ಕಾರಿನ ನಡುವೆ ಭಾನುವಾರ ಮುಖಾಮುಖಿ ಡಿಕ್ಕಿಯಾಗಿ ಕಾರಿನ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.


ತಾಲೂಕಿನ ಮಡಬ ಗ್ರಾಮದ ಮಂಜುನಾಥ್(26) ಮೃತಪಟ್ಟವರು.


ಚನ್ನರಾಯಪಟ್ಟಣದ ಕಡೆಗೆ ಬರುತ್ತಿದ್ದ ಕಾರು, ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಬಸ್‌ನ ಮುಂಭಾಗ ಮುರಿದುಕೊಂಡು ಕಾರು ಕ್ಯಾಬಿನ್ ಕೆಳ ಭಾಗಕ್ಕೆ ನುಗ್ಗಿದೆ. ಕಾರು ಅಪ್ಪಚ್ಚಿಯಾಗಿದ್ದು ಚಾಲಕ ಮಂಜುನಾಥ್ ದೇಹ ನುಜ್ಜುಗುಜ್ಜಾಗಿತ್ತು.


ಕಾರನ್ನು ಹೊರಗೆಳೆದು ಮೃತದೇಹ ಹೊರ ತೆಗೆಯಲು ಪೊಲೀಸರು ಹರಸಾಹಸಪಟ್ಟರು. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.