ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಸನಿಹ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಧಾರವಾಡ ತಾಲೂಕಿನ ಗರಗ ಗ್ರಾಮದ ಸುಶಿಲೇಂದ್ರ ಲಕ್ಷ್ಮಣರಾವ್ ದೇಶಪಾಂಡೆ ( 34) ಮೃತಪಟ್ಟ ದುರ್ದೈವಿ.
ಕಾರು ಚಾಲಕ ಧಾರವಾಡ ಮದಿಹಾಳದ ಅರುಣಸಿಂಗ್ ಭರತಸಿಂಗ್ ಹಜಾರೆ, ಎಂ.ಆರ್. ನಗರದ ರಾಜು ಸುಭಾಶ ಬೆಂಡಿಗೇರಿ, ಪುಡಕಲಕಟ್ಟಿಯ ವಿನೋದ ಕಲ್ಲಪ್ಪ ತರ್ಲಘಟ್ಟ, ಜನ್ನತ ನಗರದ ವಿಜಯಕುಮಾರ ವೆಂಕಟೇಶ ಗೊಟಗೂರ ಹಾಗೂ ಸಾಧನಕೇರಿಯ ಅಬ್ದುಲ್ಖಾದರ ಪೀರಸಾಬ ಜಮಖಾನದಾರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಸಿ.ಎನ್. ಕರವೀರಪ್ಪನವರ ತನಿಖೆ ಕೈಗೊಂಡಿದ್ದಾರೆ.