ಮಾಗಡಿ: ತಾಲೂಕಿನ ಭದ್ರಾಪುರ ಬಳಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: Asian Champions Trophy: ಏಷ್ಯನ್ ಚಾಂಪಿಯನ್ಸ್ ಹಾಕಿ: ಫೈನಲ್ನಲ್ಲಿ ಚೀನಾವನ್ನು ಮಣಿಸಿ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡ
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಹುಲಿವಾನ ಗ್ರಾಮದ ನಂಜುಂಡಪ್ಪ (55), ಪತ್ನಿ ಶಾರದಮ್ಮ (50), ತಾಯಿ ಭದ್ರಮ್ಮ (85), ಸೇರಿ 4 ಮಂದಿ ಮೃತಪಟ್ಟರೆ, ಮಗಳು ಕುಸುಮ ತೀವ್ರಗಾಯವಾಗಿದೆ.
ಬೆಂಗಳೂರಿನ ಬಗಲಗುಂಟೆ ಗ್ರಾಮದಲ್ಲಿ ವಾಸವಾಗಿದ್ದರು. ಕುಣಿಗಲ್ ತಾಲೂಕಿನ ಎಡೆಯೂರು ಹುಲಿವಾನ ಗ್ರಾಮದ ಮುನೇಶ್ವರ ದೇಗುಲದಲ್ಲಿ ಪೂಜಾ ಕಾರ್ಯಮುಗಿಸಿ ಬೆಂಗಳೂರಿನ ಬಗಲಗುಂಟೆಗೆ ತೆರಳುವ ಮಾರ್ಗಮಧ್ಯೆ ಭದ್ರಾಪುರ ಗೇಟ್ ತಿರುವಿನ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರುನಲ್ಲಿದ್ದ 5 ಮಂದಿಯಲ್ಲಿ 4 ಮಂದಿ ಮೃತಪಟ್ಟರೆ ತೀವ್ರವಾಗಿ ಗಾಯಗೊಂಡ ಕುಸುಮಳನ್ನು ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ, ಕಾರುನಲ್ಲಿದ್ದ ಸಾಕು ನಾಯಿ ಅಪಾಯದಿಂದ ಪಾರಾಗಿದೆ.
ನಂಜುಂಡ ಬೆಂಗಳೂರಿನಲ್ಲಿ ಗುತ್ತಿಗೆದಾರರಾಗಿದ್ದಾರೆ, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.